ನಾಲ್ಕೇ ಮುಖ್ಯ ಪದಾರ್ಥಗಳನ್ನು ಬಳಸಿ ತುಂಬಾ ಟೇಸ್ಟಿಯಾದ ಸೂಪ್ ಮಾಡಬಹುದು ಎಂದರೆ ಯಾರೂ ನಂಬೋಕೆ ಸಾಧ್ಯವಿಲ್ಲ. ಆದರೆ ನಾವಿಂದು ಅಂತಹುದೇ ಒಂದು ರೆಸಿಪಿ ಹೇಳಿಕೊಡಲಿದ್ದೇವೆ. ಕ್ರೀಮಿ ಆಲೂಗಡ್ಡೆಯ ಸೂಪ್ ಮಾಡಲು ಮುಖ್ಯವಾಗಿ ನಾಲ್ಕೇ ಪದಾರ್ಥಗಳನ್ನು ಬಳಸಲಾಗಿದೆ. ಮಾತ್ರವಲ್ಲದೆ ಇದು ನೀವು ಇಲ್ಲಿಯವರೆಗೆ ಎಂದೂ ಟ್ರೈ ಮಾಡದ ಅತ್ಯಂತ ಸುಲಭದ ಸೂಪ್ ಕೂಡಾ ಆಗಬಹುದು. ಇದನ್ನು ಮಾಡಲು ಕೇವಲ 30 ನಿಮಿಷ ಸಾಕು ಎಂದರೆ ಸವಿದವರು ಖಂಡತಾ ಸುಳ್ಳು ಎನ್ನುತ್ತಾರೆ.
Advertisement
ಬೇಕಾಗುವ ಪದಾರ್ಥಗಳು:
ಬೆಣ್ಣೆ – 6 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಿಪ್ಪೆ ಸುಲಿದು ಘನಗಳಾಗಿ ಕತ್ತರಿಸಿದ ಆಲೂಗಡ್ಡೆ – 400 ಗ್ರಾಂ
ನೀರು – ಆಲೂಗಡ್ಡೆ ಬೇಯಿಸಲು ಬೇಕಾಗುವಷ್ಟು
ಹಾಲು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕೆ ಅನುಸಾರ
ತುರಿದ ಚೀಸ್ – 1 ಕಪ್ ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಓಟ್ಸ್ ಮಸಾಲ..
Advertisement
ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‌ನಲ್ಲಿ 1 ಟೀಸ್ಪೂನ್ ಬೆಣ್ಣೆಯನ್ನು ಕರಗಿಸಿ, ಈರುಳ್ಳಿ ಹಾಕಿ ಮೃದುವಾಗುವವರೆಗೆ ಹುರಿಯಿರಿ. ಬಳಿಕ ಅದನ್ನು ಒಂದು ಬೌಲ್‌ಗೆ ವರ್ಗಾಯಿಸಿ.
* ಒಂದು ಪಾತ್ರೆಯಲ್ಲಿ ಆಲೂಗಡ್ಡೆ ಹಾಕಿ, ಅದು ಮುಳುಗುವುದಕ್ಕಿಂತಲೂ ಒಂದು ಇಂಚಿನಷ್ಟು ಹೆಚ್ಚುವರಿ ನೀರು ಸೇರಿಸಿ, ಸುಮಾರು 15 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
* ಆಲೂಗಡ್ಡೆ ಮೃದುವಾದ ಬಳಿಕ ಅದರ ಅರ್ಧ ಇಂಚಿನಷ್ಟು ನೀರನ್ನು ಉಳಿಸಿಕೊಂಡು ಉಳಿದ ನೀರನ್ನು ಹರಿಸಿ.
* ಈಗ ಅದಕ್ಕೆ ಹುರಿದ ಈರುಳ್ಳಿಯನ್ನು ಸೇರಿಸಿ, ಉಳಿದ 5 ಟೀಸ್ಪೂನ್ ಬೆಣ್ಣೆ, ಉಪ್ಪು, ಮೆಣಸಿನಪುಡಿ ಹಾಗೂ ಹಾಲನ್ನು ಸೇರಿಸಿಕೊಳ್ಳಿ.
* ಈಗ ಆಲೂಗಡ್ಡೆಯನ್ನು ನಿಧಾನವಾಗಿ ಮ್ಯಾಶ್ ಮಾಡಿ.
* ಬಳಿಕ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸುವುದನ್ನು ಮುಂದುವರಿಸಿ. ನಡುವೆ ತುರಿದ ಚೀಸ್ ಸೇರಿಸಿ.
* ಇದೀಗ ಕ್ರೀಮಿ ಆಲೂಗಡ್ಡೆ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್