ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಭಾರತೀಯ ಮಹಿಳೆಯರ ಹೆಸರು ಕೇಳಿಬಂದಿದೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris), ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಮೆರಿಕ ಮೂಲದ ಫೋರ್ಬ್ಸ್ ಸಂಸ್ಥೆ ಪ್ರಕಟಿಸಿದ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರ ಪೈಕಿ ನಿರ್ಮಲಾ ಸೀತಾರಾಮನ್ ಅವರು 32ನೇ ರ‍್ಯಾಂಕ್‌ನಲ್ಲಿದ್ದರೆ, ಎಚ್‌ಸಿಎಲ್ (HCL) ಕಾರ್ಪೊರೇಷನ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ (Roshni Nadar Malhotra) 60ನೇ ರ‍್ಯಾಂಕ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್ 70ನೇ ರ‍್ಯಾಂಕ್, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ 76ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
Advertisement
Advertisement
ಇನ್ನೂ ಯುರೋಪಿಯನ್ ಕಮಿಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ (Ursula von der Leyen) ನಂ.1, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಕ್ರಿಸ್ಟಿನ್ ಲಗಾರ್ಡೆ 2ನೇ ಸ್ಥಾನ, ಯುಎಸ್ ಉಪಾಧ್ಯಕ್ಷ ಕಮಲ್ ಹ್ಯಾರಿಸ್ 3ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಮಹಾಪರಿನಿರ್ವಾಣ ದಿನ ಆಚರಣೆ – ಅಂಬೇಡ್ಕರ್ ಭಾವ ಚಿತ್ರಕ್ಕೆ ತಲೆಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ
Advertisement
ರಾಜಕೀಯಕ್ಕೂ ಮುನ್ನ ಯುಕೆಯ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಬಿಬಿಸಿ ವರ್ಲ್ಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು 2019ರಿಂದಲೂ ಭಾರತದಲ್ಲಿ ಪೂರ್ಣ ಸಮಯದ ವರೆಗೆ ಹಣಕಾಸು ಸಚಿವರಾಗಿ ಅಧಿಕಾರ ಪೂರೈಸುತ್ತಿದ್ದಾರೆ. ಅಲ್ಲದೇ ವಾಣಿಜ್ಯ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥರಾಗಿಯೂ ಇದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರೂ ಆಗಿದ್ದಾರೆ ಫೋಬ್ಸ್ ಉಲ್ಲೇಖಿಸಿದೆ.
Advertisement
ನಂತರದ ಸ್ಥಾನದಲ್ಲಿರುವ ರೋಶ್ನಿ ನಾಡರ್ ಮಲ್ಹೋತ್ರಾ ಅವರು ಕೈಗಾರಿಕೋದ್ಯಮಿ ಶಿವ ನಾಡಾರ್ ಅವರ ಪುತ್ರಿ ಆಗಿದ್ದು, ಹೆಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. 2020ರಿಂದ ಕಂಪನಿಯ ಎಲ್ಲಾ ಕೆಲಸಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸೋಮಾ ಮೊಂಡಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. 2021ರಲ್ಲಿ ಅವರು ತಮ್ಮ ಸ್ಥಾನವನ್ನು ಅಲಂಕರಿದರು. ಅಲ್ಲದೇ ಮೊಂಡಲ್ ಅಧಿಕಾರ ವಹಿಸಿಕೊಂಡ ಮೊದಲ ವರ್ಷದಲ್ಲೇ ಸಂಸ್ಥೆಯು ಮೂರು ಪಟ್ಟು ಲಾಭವನ್ನು ಗಳಿಸಿತ್ತು ಎಂದು ವರದಿ ಹೇಳಿದೆ.
ಇನ್ನೂ ಕಿರಣ್ ಮಜುಂದಾರ್ ಶಾ ಅವರು ಸ್ವಂತ ಉದ್ಯಮದಲ್ಲಿ ಸಕ್ಸಸ್ ಕಂಡ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 1978ರಲ್ಲಿ ಬಯೋಕಾನ್ ಜೈವಿಕ ಔಷಧೀಯ ಸಂಸ್ಥೆಯನ್ನು ಸ್ಥಾಪಿದ್ದಾರೆ. ಈ ಸಂಸ್ಥೆಯು ಮಲೇಷ್ಯಾದ ಜೋಹೋರ್ ಪ್ರದೇಶದಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿರುವುದು ವೀಶೇಷ. ಇದನ್ನೂ ಓದಿ: ರಜಪೂತ್ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ