ಮೆಕ್ಸಿಕೋ ಸಿಟಿ: ಅಮೆರಿಕಕ್ಕೆ (America) ಕೊರಿಯರ್ (Courier) ಮೂಲಕ ಕಳುಹಿಸಬೇಕಿದ್ದ ಪ್ಯಾಕೇಜ್ ಒಂದರಲ್ಲಿ 4 ಮಾನವನ ತಲೆಬುರುಡೆ (Skull) ಪತ್ತೆಯಾಗಿರುವ ಘಟನೆ ಮೆಕ್ಸಿಕೋವಿನ (Mexico) ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ತಲೆಬುರುಡೆಗಳನ್ನು ಕಂಡ ವಿಮಾನ ನಿಲ್ದಾಣ ಸಿಬ್ಬಂದಿ ದಂಗಾಗಿದ್ದಾರೆ.
ವರದಿಗಳ ಪ್ರಕಾರ ಮಧ್ಯ ಮೆಕ್ಸಿಕೋವಿನ ಕ್ವೆರೆಟಾರೊ ಇಂಟರ್‌ಕಾಂಟಿನೆಂಟಲ್ ಏರ್‌ಪೋರ್ಟ್‌ನಲ್ಲಿ ಕೊರಿಯರ್ ಪ್ಯಾಕೇಜ್ ಒಂದರಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ತಲೆಬುರುಡೆಗಳನ್ನು ಸುತ್ತಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ.
Advertisement
Advertisement
ಈ ಪ್ಯಾಕೇಜ್ ಅನ್ನು ಮೈಕೋವಾಕ್‌ನಿಂದ ಕಳುಹಿಸಲಾಗಿದೆ ಎನ್ನಲಾಗಿದೆ. ಈ ಪ್ರದೇಶ ಮೆಕ್ಸಿಕೋದಲ್ಲಿ ಅತಿ ಹೆಚ್ಚು ಹಿಂಸಾತ್ಮಕ ಘಟನೆಗಳು ನಡೆಯುವ ಸ್ಥಳವಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ
Advertisement
ಪತ್ತೆಯಾಗಿರುವ ಮಾನವನ ತಲೆಬುರುಡೆಗಳು ಯಾರಿಗೆ ಸೇರಿರುವುದು, ಅದರ ವಯಸ್ಸು ಅಥವಾ ಇತರ ಮಾಹಿತಿಗಳನ್ನು ಹಂಚಿಕೊಳ್ಳಲಾಗಿಲ್ಲ. ಇಂತಹ ಮಾನವನ ಅವಶೇಷಗಳ ವಾರ್ಗಾವಣೆಗೆ ಸಮರ್ಥ ಆರೋಗ್ಯ ಪ್ರಾಧಿಕಾರದಿಂದ ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಆದರೆ ಈ ಸಂದರ್ಭದಲ್ಲಿ ಪಡೆಯಲಾಗಿಲ್ಲ ಎನ್ನಲಾಗಿದೆ.
Advertisement
ಮಾನವನ ತಲೆಬುರುಡೆಗಳ ಸಾಗಾಟದ ಹಿಂದೆ ಅಪರಾಧ ಕೃತ್ಯ ಇದೆಯೇ ಎಂಬ ಬಗ್ಗೆ ಹಾಗೂ ಅದನ್ನು ಅಮೆರಿಕಗೆ ಕಳುಹಿಸುವ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್