ಬೆಂಗಳೂರು: ಹತ್ತು ವರ್ಷಗಳ ನಂತರ ಸ್ಯಾಂಡಲ್ವುಡ್ ಹಿಟ್ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ರು ಒಂದಾಗಿದ್ದು, ಸಿನಿರಸಿಕರನ್ನು ಮುಗುಳ್ನಗೆಯಲ್ಲಿ ತೇಲಿಸಲು ಶುಕ್ರವಾರ ನಿಮ್ಮ ಮುಂದೆ ಬರಲಿದ್ದಾರೆ. ಈಗಾಗಲೇ ಗಣೇಶ್ ತಮ್ಮ ಮುಗುಳ್ನಗೆ ಮೂಲಕ ಅಭಿಮಾನಿಗಳನ್ನ ಸಿನಿಮಾದೆಡೆ ಸೆಳೆಯಲು ಯಶಸ್ವಿಯಾಗಿದ್ದಾರೆ.
ಗಣೇಶ್ ಮುಗುಳು ನಗೆಯಲ್ಲಿ ಒಟ್ಟು ನಾಲ್ಕು ನಾಯಕಿಯರ ನಗು ಸಹ ಸೇರಿಕೊಂಡಿದೆ. ಗಣೇಶರೊಂದಿಗೆ ಆಶಿಕಾ, ನಿಖಿತಾ, ಅಮೂಲ್ಯ ಮತ್ತು ಅಪೂರ್ವ ಅರೋರಾ ಹಿತವಾದ ನಗು ನಿಮ್ಮನ್ನು ಸೆಳೆಯಲಿದೆ. ಸಿನಿಮಾದ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಗಣೇಶ್ ಸ್ಕ್ರಿಪ್ಟ್ ನ ಕೆಲವೊಂದು ಡೈಲಾಗ್ ಗಳನ್ನು ಮಾರ್ಕ್ ಮಾಡಿಕೊಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಹಿಂದೆ ಗಣೇಶ್ ಮುಂಗಾರು ಮಳೆಯ ಸಿನಿಮಾದಲ್ಲಿಯೂ ಕೆಲವೊಂದು ಡೈಲಾಗ್ ಗಳನ್ನು ಮಾರ್ಕ್ ಮಾಡಿದ್ದರು.
Advertisement
Advertisement
ಹೀಗೆ ಕಾಣಿಸಲಿದ್ದಾರೆ ನಾಯಕಿಯರು:
1. ಆಶಿಕಾ: ಮೈಸೂರಿನ ಹುಡುಗಿಯಾಗಿ ಆಶಿಕಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಜಿನಿಯರಿಂಗ್ ಅಥವಾ ಪದವಿ ಮುಗಿದಾಗ ಉಂಟಾಗುವ ಲವ್ ಮತ್ತು ಭಾವನೆಗಳನ್ನು ಮರೆಮಾಚುವ ಚೆಂದದ ಹುಡುಗಿಯಾಗಿ ಆಶಿಕಾ ಬಣ್ಣ ಹಚ್ಚಿದ್ದಾರೆ.
Advertisement
2. ನಿಖಿತಾ: ಪ್ರಬುದ್ಧತೆಯನ್ನು ಹೊಂದಿರುವ ಹುಡುಗಿಯಾಗಿ ನಿಖಿತಾ ಮಿಂಚಿದ್ದಾರೆ. ಜೀವನವನ್ನು ಶಿಸ್ತುಬದ್ಧ ಮತ್ತು ಕೆಲವೊಂದು ತನ್ನದೇ ಕಂಡೀಷನ್ ಗಳ ನಡೆಸಬೇಕು ಎಂದು ನಂಬಿರುವ ಮಾಡರ್ನ್ ಥಾಟ್ ಹೊಂದಿರುವ ಹುಡುಗಿ.
Advertisement
3. ಅಮೂಲ್ಯ: ಇಲ್ಲಿ ಅಮೂಲ್ಯ ಮಧ್ಯಮ ವರ್ಗದಲ್ಲಿ ಬೆಳೆದ ಸುಂದರ ಹುಡುಗಿ. ನಾಯಕನೂ ಸಹ ಮಧ್ಯಮ ವರ್ಗದವನಾಗಿರುತ್ತಾನೆ. ಹಾಗೆಯೇ ಇಬ್ಬರ ನಡುವೆ ಉಂಟಾಗುವ ತೊಂದರೆ ಮತ್ತು ಅವುಗಳಿಂದ ಹೊರ ಬರಲು ಪ್ರಯತ್ನಿಸುವ ಪಾತ್ರವನ್ನು ಅಮೂಲ್ಯ ನಿರ್ವಹಿಸಿದ್ದಾರೆ.
4. ಅಪೂರ್ವ ಅರೋರಾ: ಗ್ರಾಮೀಣ ಸೊಗಡಿನ, ಮುದ್ದಾದ ಮುಗ್ಧ ಹುಡುಗಿ ಅಪೂರ್ವ. ಗ್ರಾಮದಲ್ಲಿ ಹುಟ್ಟಿದ ಹುಡುಗಿ, ಬೇರೆ ಜಗತ್ತಿನ ಬಗ್ಗೆ ಅಷ್ಟಾಗಿ ತಿಳುವಳಿಕೆಯನ್ನು ಹೊಂದಿರುವ ಸಾದಾ ಸೀದಾ ಹಳ್ಳಿಯ ಚೆಲುವೆಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅಪೂರ್ವರ ಕುಂದಾಪುರ ಶೈಲಿಯ ಕನ್ನಡ ಭಾಷೆ ನಿಮಗೆ ಖಂಡಿತಾ ಇಷ್ಟವಾಗುತ್ತದೆ.
ಸಿನಿಮಾ ಕಹಾನಿ: ಕಣ್ಣಲ್ಲಿ ಒಂದು ಹನಿ ಕಣ್ಣೀರು ಬರದ ಹುಡುಗನ ಜೀವನದಲ್ಲಿ ನಾಲ್ಕು ವಿಭಿನ್ನ ಹುಡುಗಿಯರು ಬಂದು ಹೋಗುತ್ತಾರೆ. ಈ ನಾಲ್ವರು ಹುಡುಗನ ಕಣ್ಣಲ್ಲಿ ಕಣ್ಣೀರು ತರಿಸುವ ಪ್ರಯತ್ನವನ್ನು ನಡೆಸುವ ಕಥೆಯನ್ನು ಸಿನಿಮಾ ಒಳಗೊಂಡಿದೆ.
ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಿಡುಗಡೆಗೊಂಡಾಗ ಅದು ಒಂದು ಟ್ರೆಂಡ್ ಸೃಷ್ಟಿ ಮಾಡಿತ್ತು. ಅಂದು ಆ ಟ್ರೆಂಡ್ ಸೃಷ್ಟಿ ಮಾಡಿದ್ದ ಜೋಡಿ 10 ವರ್ಷಗಳ ಬಳಿಕ ಒಂದಾಗಿದೆ. ಹಾಗಾಗಿ ಭಟ್ರು ಮತ್ತು ನನಗೆ ಹೆಚ್ಚಿನ ಜವಬ್ದಾರಿ ಇದೆ ಎಂದು ನಟ ಗಣೇಶ್ ಹೇಳಿದರು.
ಹರಿಕೃಷ್ಣರ 100ನೇ ಸಿನಿಮಾ: ಚಿತ್ರ ಒಟ್ಟು 8 ಹಾಡುಗಳನ್ನು ಹೊಂದಿದ್ದು, ಪ್ರತಿಯೊಂದು ಹಾಡು ಒಂದು ವಿಷಯವನ್ನು ಒಳಗೊಂಡಿದೆ. ಎಲ್ಲ ಹಾಡುಗಳು ಚೆನ್ನಾಗಿ ಮೂಡಿಬಂದಿದೆ. 5 ಮುಖ್ಯ ಹಾಡುಗಳು, 3 ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಸಿನಿಮಾದಲ್ಲಿ ಬರಲಿವೆ. ಇದು ಹರಿಕೃಷ್ಣರ ನೂರನೇ ಸಿನಿಮಾದ ಸಂಗೀತ ಸಂಯೋಜನೆಯನ್ನು ಹೊಂದಿದೆ. ಅವರ ಪರಿಶ್ರಮವಿಲ್ಲದ ಈ ಹಾಡುಗಳು ಹಿಟ್ ಆಗಲು ಸಾಧ್ಯವಿರಲಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು.
ಮುಗುಳು ನಗೆ ಚಿತ್ರ ಎಸ್.ಎಸ್.ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಯೋಗರಾಜ್ ಸಿನಿಮಾಸ್ ಬ್ಯಾನರ್ಗಳಲ್ಲಿ ನಿರ್ಮಾಣವಾಗಿದ್ದು, ಸೈಯದ್ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನೂ ಸಿನಿಮಾದ ವಿಶೇಷ ಪಾತ್ರದಲ್ಲಿ ನಿರ್ಮಾಪಕ ಸೈಯದ್ ಸಲಾಂ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.