ಬೆಂಗಳೂರು: ನಗರದಲ್ಲಿ ರಸ್ತೆಗಳು (Road) ಪದೇ ಪದೇ ಕುಸಿಯುತ್ತಲೇ ಇವೆ. ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಾಂತರವಾಗುತ್ತಿದ್ದು, ಬಸವೇಶ್ವರ ನಗರದ (Basaveshwara Nagar) ರಸ್ತೆ ಕುಸಿದಿದೆ.
Advertisement
ರಾಜಾಜಿನಗರ (Rajajinagar) ವಿಧಾನಸಭಾ ಕ್ಷೇತ್ರದ ಬಸವೇಶ್ವರ ನಗರ, ವಾರ್ಡ್ ನಂಬರ್ 100ರಲ್ಲಿ ರಸ್ತೆ ಕುಸಿದು, ಬೃಹತ್ ಗುಂಡಿ ಬಿದ್ದಿದೆ. ಮೊನ್ನೆ ಸಂಜೆಯೇ ಈ ರಸ್ತೆ ಕುಸಿದು ಗುಂಡಿ ಬಿದ್ದಿದ್ದು, ಸ್ಥಳೀಯರು ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚಿದ್ದರು. ಇದೀಗ ಸುಮಾರು 7 ಅಡಿ ಉದ್ದ ರಸ್ತೆ ಕುಸಿದ ಪರಿಣಾಮ, ಪೈಪ್ ಲೈನ್‍ನ ಪೈಪ್ ಕೂಡ ಹೊಡೆದು ಹೋಗಿದೆ. ಜೊತೆಗೆ ಸುಮಾರು 4 ಅಡಿಯಷ್ಟು ಆಳದ ಗುಂಡಿ ಬಿದ್ದಿದೆ. ಇದನ್ನೂ ಓದಿ: ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿ ಮುಖಕ್ಕೆ ಆ್ಯಸಿಡ್ ಎರಚಿದ ಪತ್ನಿ!
Advertisement
Advertisement
ಗುಂಡಿ ಬಿದ್ದು ಒಂದೂವರೆ ದಿನವಾದ್ರೂ ಸ್ಥಳಕ್ಕೆ ಸುಳಿಯದ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಪಬ್ಲಿಕ್ ಟಿವಿಯ ವರದಿ ನಂತರ ಸ್ಥಳಕಾಗಮಿಸಿದ್ರು. ಜಲಮಂಡಳಿಯ ಸಿಬ್ಬಂದಿ ದುರಸ್ತಿ ಕಾರ್ಯ ಮಾಡಿ, ಗುಂಡಿಯನ್ನು ಮುಚ್ಚುವ ಪ್ರಯತ್ನ ಮಾಡಿ, ನೀರನ್ನು ಹೊರಹಾಕುವ ಕೆಲಸ ಮಾಡಿದ್ರು. ಈ ಗುಂಡಿ ಪಕ್ಕದಲ್ಲೇ ಶಾಲೆಯಿದ್ದು ಮಕ್ಕಳು, ಪೋಷಕರು ಪರದಾಡಿದ್ರು. ಇನ್ನೊಂದು ದೊಡ್ಡ ಗುಂಡಿ ಶಾಲೆಯ ಮುಂಭಾಗದಲ್ಲಿ ಇದ್ದು, ಎರಡು ತಿಂಗಳಿನಿಂದ ಹಾಗೆ ಇದೆ ಈ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಮಕ್ಕಳು ಬರ್ತಾರೆ: ಕಟೀಲ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k