– ತಾಯಿ ಮರಳಿದ್ದಾರೆ ಎಂದ ಗೂಳಿಹಟ್ಟಿ ಶೇಖರ್
– ಹಾಲುರಾಮೇಶ್ವರ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸ್ವಾಗತ
ಚಿತ್ರದುರ್ಗ: ಆಮಿಷಗಳಿಗೆ ಬಲಿಯಾಗಿ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರದ ನಾಲ್ಕು ಕುಟುಂಬಗಳು ಇಂದು ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಕುಟುಂಬದ ಆಧಾರಸ್ತಂಭವಾಗಿದ್ದ ಮನೆಯ ಯಜಮಾನನಿಗೆ ವಕ್ಕರಿಸಿದ್ದ ಕ್ಯಾನ್ಸರ್ ರೋಗವನ್ನೇ ಬಂಡವಾಳ ಮಾಡಿಕೊಂಡು ಪ್ರದೀಪ್ ಎಂಬವರ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಮತಾಂತರವಾಗಿ ಎರಡು ವರ್ಷ ಕಳೆದರೂ ಸಹ ಅವರ ತಂದೆಗೆ ರೋಗ ನಿವಾರಣೆ ಆಗಲಿಲ್ಲ. ಹೀಗಾಗಿ ಇಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಮ್ಮುಖದಲ್ಲಿ ನಾಲ್ಕು ಕುಟುಂಬಗಳು ಸ್ವಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರಳಿವೆ. ಇದನ್ನೂ ಓದಿ: ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್ ಜೋಷಿ ಸ್ಪಷ್ಟನೆ
Advertisement
Advertisement
ಹಾಲುರಾಮೇಶ್ವರ ದೇಗುಲದಲ್ಲಿ ಕೇಸರಿ ಬಟ್ಟೆಯನ್ನು ಹಾಕುವ ಮೂಲಕ ಹಿಂದೂ ಧರ್ಮಕ್ಕೆ ಅವರನ್ನು ಸ್ವಾಗತಿಸಲಾಯಿತು. ಹಾಲು ರಾಮೇಶ್ವರನಿಗೆ ಪೂಜೆ ಸಲ್ಲಿಸಿ,ಪ್ರಸಾದ ಸ್ವೀಕರಿಸುವ ಮೂಲಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದಾರೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್ ಕಂಪನಿ ಖರೀದಿಸಿದ ರಿಲಯನ್ಸ್
Advertisement
Advertisement
ಕಾಳ್ಗಿಚ್ಚಿನಂತೆ ನಮ್ಮ ಕ್ಷೇತ್ರದಲ್ಲಿ ಮತಾಂತರ ಹರಡುತ್ತಿದೆ ಎಂದು ಕ್ರೈಸ್ತ ಮಿಷಿನರಿಗಳ ವಿರುದ್ಧ ವಿಧಾನಸೌಧದಲ್ಲಿ ಗುಡುಗಿದ್ದ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಹುಟ್ಟಿನಿಂದಲೂ ಕ್ರೈಸ್ತ ಧರ್ಮದಲ್ಲಿರುವವರಿಗೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಬೇಕು ಅಂತ ಕ್ಷಮೆಯಾಚಿಸಿದ್ದಾರೆ. ಸ್ವತಃ ಅವರ ತಾಯಿಯೇ ಮತಂತಾರವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದ್ದ ಅವರು, ಹೊಸದುರ್ಗ ಕ್ಷೇತ್ರದಲ್ಲಿ ಮತಾಂತರದ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಇಂದು ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ಮತಾಂತರವಾಗಿದ್ದ ನಾಲ್ಕು ಕುಟುಂಬಗಳನ್ನು ಇಂದು ವಾಪಸ್ ಹಿಂದೂ ಧರ್ಮಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲು ಘರ್ ವಾಪ್ಸಿ ಕಾರ್ಯಕ್ರಮ ನಡೆಸುತ್ತಿದ್ದೇನೆ. ಮತಾಂತರವಾಗಿದ್ದ ನನ್ನ ತಾಯಿ ಸಹ ಮರಳಿ ನಮ್ಮ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ನನ್ನ ಮನೆಯಲ್ಲಿ ತಾಯಿ ಕ್ಷೇಮವಾಗಿದ್ದಾರೆ. ಹಾಗೆಯೇ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಗುಡುಗಿದ್ದೇನೆ ಹೊರತು ಹುಟ್ಟಿನಿಂದಲೇ ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ. ಆದರೂ ಸಹ ನನ್ನ ಈ ಹೋರಾಟದಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಮತಾಂತರ ವಿಚಾರ ಇಟ್ಟುಕೊಂಡು ನಾನು ಹೊಸದುರ್ಗದಲ್ಲಿ ರಾಜಕೀಯ ಗಿಮಿಕ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.