ಬೀದರ್: ಎಳ್ಳಮಾವಾಸ್ಯೆ ಆಚರಿಸಲು ಹೋಗುವಾಗ ತೆಪ್ಪ ಮುಳುಗಿ ನಾಲ್ವರು ಬಾಲಕಿಯರು ಹಾಗೂ ಒಬ್ಬ ಬಾಲಕ ಸಾವನ್ನಪ್ಪಿದ ಘಟನೆ ಸೋಮವಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ ಬಳಿಯ ಕೆರೆಯಲ್ಲಿ ನಡೆದಿದೆ.
ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿ ಕಾರ್ಯಚರಣೆ ನಡೆಸಿ ಕೆರೆ ಪಾಲಾಗಿದ್ದ ನಾಲ್ವರು ಬಾಲಕ, ಬಾಲಕಿಯರ ಶವ ಹೊರತೆಗೆದಿದ್ದಾರೆ. ಮೃತರನ್ನು 17 ವರ್ಷದ ಜೀಯಾಬಾನು ಅಬ್ದುಲ್ ಸತ್ತಾರ್, 10 ವರ್ಷದ ತಬರೇಜ್ ನಾಜೀರಸಾಬ್, 15 ವರ್ಷದ ಇಸ್ರಾತ್ ಇಸ್ಮಾಯಿಲ್ ಖೂರೋಷಿ ಹಾಗೂ 18 ವರ್ಷದ ತನಾಜು ಬಾನು ಲಾಲ ಮಹ್ಮದ್ ಎಂದು ಗುರುತಿಸಲಾಗಿದೆ.
ಎಳ್ಳಮಾವಾಸ್ಯೆ ಆಚರಿಸಲು 9 ಮಕ್ಕಳು ಹೊಲಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡ ಪಕ್ಕದಲ್ಲೇ ಇದ್ದ ಸಿನಿ ಕೆರೆಯಲ್ಲಿ ಆಟವಾಡಲು ಹೋಗಿದ್ದರು. ಈ ವೇಳೆ ತೆಪ್ಪ ಮಗುಚಿ ಮೂವರು ಬಾಲಕಿಯರು ಹಾಗೂ ಒಬ್ಬ ಬಾಲಕ ಸೇರಿ ನಾಲ್ವರು ನೀರು ಪಾಲಾಗಿದ್ದು, ಉಳಿದ ಐವರು ಈಜುಕೊಂಡು ದಡ ಸೇರಿದ್ದರು.
ನೀರು ಪಾಲಾಗಿದ್ದ ನಾಲ್ವರ ಶವವನ್ನು ಇಂದು NDRF, ಅಗ್ನಿಶಾಮಕ ದಳ ಸಿಬ್ಬಂದಿಯ ಕಾರ್ಯಚರಣೆಯಿಂದ ಹೊರತೆಗೆಯಲಾಗಿದೆ.