CrimeLatestMain PostNational

ಕಳ್ಳ ಭಟ್ಟಿ ಸೇವಿಸಿ 4 ಮಂದಿ ಸಾವು

ಪಾಟ್ನಾ: ಬಿಹಾರದ ನಲಂದಾದಲ್ಲಿ ಕಳ್ಳ ಭಟ್ಟಿ ಸೇವಿಸಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳ್ಳ ಭಟ್ಟಿ ಸೇವಿಸಿ ಮೃತಪಟ್ಟವರು ಭಾಗೋ ಮಿಸ್ತ್ರಿ (55), ಮುನ್ನಾ ಮಿಸ್ತ್ರಿ (55), ಧರ್ಮೇಂದ್ರ(50) ಹಾಗೂ ಕಾಳಿಚರಣ್ ಮಿಸ್ತ್ರಿ ಎಂದು ಗುರುತಿಸಲಾಗಿದೆ. ಘಟನೆ ನಳಂದಾದ ಸೋಹ್ಸರಾಯ್‌ನಲ್ಲಿರುವ ಚೋಟಾ ಪಹಾರಿ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು

ಕಳ್ಳ ಭಟ್ಟಿಯನ್ನು ಸೇವಿಸಿದ ಕಾರಣ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಸಾವಿಗೆ ಕಾರಣ ಏನು ಎಂಬುದನ್ನು ಜಿಲ್ಲಾಡಳಿತ ಇನ್ನೂ ಖಚಿತಪಡಿಸಿಲ್ಲ. ಡಿಎಸ್‌ಪಿ ಶಿಬ್ಲಿ ನೋಮಾನಿ ಈ ಪ್ರಕರಣದ ತನಿಖೆ ನಡೆಸಲಿದ್ದಾರೆ. ಇದನ್ನೂ ಓದಿ: ಹಾರೆಯಿಂದ ಹೊಡೆದು ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಪಶ್ಚಿಮ ಚಂಪಾರಣ್ ಪ್ರದೇಶದಲ್ಲಿ ಕಳ್ಳ ಭಟ್ಟಿ ಸೇವಿಸಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಕಳ್ಳ ಭಟ್ಟಿ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವಂತೆ ಬಿಹಾರ ಸರ್ಕಾರ ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.

Leave a Reply

Your email address will not be published.

Back to top button