ಧಾರವಾಡ: ಅಮರನಾಥದಲ್ಲಿ (Amarnath) ಭಾರೀ ಮಳೆಯಾಗುತ್ತಿದ್ದು (Heavy Rain) ಧಾರವಾಡದಿಂದ (Dharwada) ಹೋಗಿದ್ದ ಐವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಜುಲೈ 3 ರಂದು ಧಾರವಾಡದಿಂದ ಹೋಗಿದ್ದ ಐವರು ಜುಲೈ 6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸೇನಾ ಪಡೆಯುವರು (Indian Army) ಪ್ರವಾಸಕ್ಕೆ ಬಂದಿದ್ದ ಎಲ್ಲರನ್ನೂ ಪಂಚತರಣಿ (Panchtarni) ಎಂಬಲ್ಲಿ ಖಾಸಗಿಯವರ ಟೆಂಟ್‌ನಲ್ಲಿ ಇರಿಸಿದ್ದಾರೆ. ಅದರಲ್ಲಿ ಧಾರವಾಡದ ರಾಕೇಶ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವವರೂ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರದಂತೆ ಕರ್ನಾಟಕದ ಅನೇಕ ಜಿಲ್ಲೆಯ ಜನ ಕೂಡ ಇದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು
ವಿಪರೀತ ಮಳೆ ಸುರಿಯುತ್ತಿದ್ದು, ಟೆಂಟ್ ಬಿಟ್ಟು ಹೊರಗಡೆ ಬರಲಾರದ ಸ್ಥಿತಿ ಇದೆ. ಇಲ್ಲಿ ಆಹಾರಕ್ಕೆ ಸಮಸ್ಯೆ ಆಗುತ್ತಿದ್ದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರವಾಸಿಗರನ್ನು ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಕನ್ನಡಿಗರು ಮನವಿ ಮಾಡಿದ್ದಾರೆ.
Web Stories