ನವದೆಹಲಿ: ಗರ್ಭಿಣಿ ನಾಯಿಯನ್ನು ನಾಲ್ವರು ಕಾಲೇಜು ವಿದ್ಯಾರ್ಥಿಗಳು ನಿರ್ದಾಕ್ಷಿಣ್ಯವಾಗಿ ಥಳಿಸಿದ್ದರಿಂದ ಶ್ವಾನ ಸಾವನ್ನಪ್ಪಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೇಸ್‍ಬಾಲ್ ಬ್ಯಾಟ್, ಮರದ ದೊಣ್ಣೆ ಮತ್ತು ಕಬ್ಬಿಣದ ರಾಡ್ ಹಿಡಿದುಕೊಂಡು ನಾಯಿ ಇದ್ದ ಕೋಣೆಗೆ ನುಗ್ಗಿ ನಾಯಿ ಮೇಲೆ ಹಲ್ಲೆ ನಡೆಸುತ್ತಾ ಆರೋಪಿಗಳು ನಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕವನ್ನೇ ನೀಡದೇ 60,000 ಬಿಲ್ – ಉ.ಪ್ರದೇಶದ ಶಾಮ್ಲಿ ಜಿಲ್ಲೆಯ 12 ಗ್ರಾಮಸ್ಥರಿಗೆ ಶಾಕ್
Advertisement
Advertisement
ನಾಯಿಯನ್ನು ಥಳಿಸಲು ಗುಂಪು ಗುಂಪಾಗಿ ವಿದ್ಯಾರ್ಥಿಗಳು ಸೇರಿದ್ದರಿಂದ ನಾಯಿ ಬೊಗಳು ಆರಂಭಿಸಿದೆ. ಇದರಿಂದ ಕೋಪಗೊಂಡ ಯುವಕರು ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಈ ಎಲ್ಲಾ ವಿದ್ಯಾರ್ಥಿಗಳು ಓಖ್ಲಾದ ಡಾನ್ ಬಾಸ್ಕೊ ತಾಂತ್ರಿಕ ಸಂಸ್ಥೆಯಲ್ಲಿ ಓದುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮತ್ತೊಂದು ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ಫಿಲ್ಡ್‍ನಲ್ಲಿ ನಾಯಿಯ ಕಾಲನ್ನು ಹಿಡಿದುಕೊಂಡು ಕ್ರೂರವಾಗಿ ಎಳೆದಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ದೃಶ್ಯ ಎಂತವರ ಮನ ಕಲಕುವಂತಿದೆ. ಈ ಎಲ್ಲಾ ಘಟನೆ ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಪೊಲೀಸರು ನವೆಂಬರ್ 20 ರಂದೇ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: 36 ಸೇತುವೆಗಳು ಸಂಚಾರಕ್ಕೆ ಅನರ್ಹ – ದುರಂತ ಸಂಭವಿಸೋದಕ್ಕೂ ಮುನ್ನವೇ ಎಚ್ಚೆತ್ತ ಸರ್ಕಾರ
Advertisement
ವೀಡಿಯೋದಲ್ಲಿ ನಾಯಿ ಸ್ಪಷ್ಟವಾಗಿ ಕಾಣದಿದ್ದರೂ, ಯಾರಾದರೂ ನಾಯಿಯನ್ನು ಎಳೆಯುವಾಗ ಅದು ಕಿರುಚಾಡುವುದನ್ನು, ನಾಯಿಯನ್ನು ನೊಡಿ ಯುವಕರು ನಗುತ್ತಿರುವುದನ್ನು ಕಾಣಬಹುದಾಗಿದೆ. ಈ ಮರ್ಧಯೆ ಅವರಲ್ಲಿ ಒಬ್ಬ ನಾಯಿಗೆ ಹೊಡೆಯುತ್ತಿದ್ದರೆ, ಇನ್ನೊಬ್ಬ ಪ್ರೇರೆಪಿಸುವುದನ್ನು ನೋಡಬಹುದಾಗಿದೆ.