ರಾಯಚೂರು: ನಗರಸಭೆಯ ಕಲುಷಿತ ನೀರು ಕುಡಿದು 4 ಜನ ಸಾವನ್ನಪ್ಪಿದ ಬಳಿಕವೂ ನಗರಸಭೆ ಅಧಿಕಾರಿಗಳು ಎಚ್ಚೆತ್ತಿಲ್ಲ. ಈಗಲೂ ಅಶುದ್ಧ ನೀರನ್ನೇ ನಗರಸಭೆ ಸರಬರಾಜು ಮಾಡುತ್ತಿದೆ.
ಕಳೆದ 15 ದಿನಗಳಿಂದ ಪ್ರತಿನಿತ್ಯ ಜನ ಆಸ್ಪತ್ರೆಗೆ ದಾಖಲಾಗುತ್ತಲೇ ಇದ್ದಾರೆ. ಗುರುವಾರ ಸಹ ವಾಂತಿ-ಭೇದಿ ಪ್ರಕರಣಗಳು ಮುಂದುವರಿದಿವೆ. ಹೆಚ್ಚು ಬಾಧಿತ ಪ್ರದೇಶಗಳಲ್ಲಿ ಮೆಡಿಕಲ್ ಕ್ಯಾಂಪ್ ತೆರೆಯಲಾಗಿದೆ.
Advertisement
Advertisement
ರಾಯಚೂರು ನಗರಸಭೆ ನಿಜಕ್ಕೂ ಅದ್ಯಾವ ಉದ್ದೇಶವನ್ನು ಹೊಂದಿದೆಯೋ ಗೊತ್ತಿಲ್ಲ. ಮೇ 30 ರಂದು ಕಲುಷಿತ ನೀರು ಕುಡಿದ ಪರಿಣಾಮ ಮೊದಲ ಸಾವು ಸಂಭವಿಸಿದ್ದರೂ ಈಗಲೂ ಅಶುದ್ಧ ನೀರನ್ನೇ ಜನರಿಗೆ ಸರಬರಾಜು ಮಾಡುತ್ತಿದೆ. ಹೀಗಾಗಿ ಪ್ರತಿನಿತ್ಯ ಜನ ವಾಂತಿ-ಭೇದಿ ಕಾರಣದಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದನ್ನೂ ಓದಿ: ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ
Advertisement
Advertisement
ಹೆಚ್ಚು ಬಾಧಿತ ಪ್ರದೇಶಗಳಾದ ಅರಬ್ ಮೊಹಲ್ಲಾ, ಇಂದಿರಾ ನಗರ, ಅಂದ್ರೂಲ್ ಕಿಲ್ಲಾಗಳಲ್ಲಿ ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದ್ದು ವೈದ್ಯರ ತಂಡಗಳನ್ನು ನೇಮಿಸಲಾಗಿದೆ. ಆದರೆ ಕಲುಷಿತ ನೀರು ಈಗಲೂ ಸರಬರಾಜು ಆಗುತ್ತಿರುವುದಕ್ಕೆ ಅದೇ ನೀರನ್ನು ಕುಡಿದು ಜನ ವಾಂತಿ-ಭೇದಿಯಿಂದ ನರಳುತ್ತಿದ್ದಾರೆ. ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದು, ಗಂಭೀರ ಸ್ವರೂಪದ ರೋಗಿಗಳನ್ನು ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಕೆಲವರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದರೆ. ಇನ್ನೂ ಕೆಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 200 ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮ – ಫಸ್ಟ್ ರ‍್ಯಾಂಕ್ ಅಭ್ಯರ್ಥಿ ಅರೆಸ್ಟ್
ಜಿಲ್ಲಾಡಳಿತ ನಿರಂತರ ಸಭೆ, ಪರಿಶೀಲನೆ ಮುಂದುವರಿಸಿದೆ. ಆದರೆ ಪರಿಶೀಲನೆ ಮಾಡಿದಷ್ಟು ಯಡವಟ್ಟುಗಳೇ ಕಾಣಿಸುತ್ತಿದೆ. ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಲೋಪವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಆದರೆ ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಯಾವಾಗಲೋ ಎಚ್ಚೆತ್ತುಕೊಳ್ಳಬೇಕಿದ್ದ ಅಧಿಕಾರಿಗಳು ನಿದ್ರಾವಸ್ಥೆಯಿಂದ ಈಗ ಎದ್ದಿದ್ದಾರೆ. ಅದಿನ್ನೆಷ್ಟು ಜನ ತೊಂದರೆ ಅನುಭವಿಸಬೇಕಿದೆಯೋ ಗೊತ್ತಿಲ್ಲ. ಕನಿಷ್ಠ ಈಗಲಾದರೂ ಯುದ್ಧೋಪಾದಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಲಸ ಮಾಡಬೇಕಿದೆ.