ಮುಂಬೈ: ಹಣ, ಚಿನ್ನ ಕಳ್ಳಸಾಗಣೆ ಮಾಡಲು ಜನರು ಚಿತ್ರ ವಿಚಿತ್ರ ಮಾರ್ಗಗಳನ್ನು ಕಂಡುಹಿಡಿಯುತ್ತಾರೆ. ಆದರೂ ಏರ್‌ಪೋರ್ಟ್‌ಗಳಲ್ಲಿ (Airport) ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಇಲ್ಲೊಂದು ಕುಟುಂಬ ಹಣವನ್ನು ಕಳ್ಳಸಾಗಣೆ (smuggling) ಮಾಡುವಾಗ ಸಿಕ್ಕಿಬಿದ್ದಿರುವ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ (Mumbai Airport) ನಡೆದಿದೆ. ಅಧಿಕಾರಿಗಳು ಬರೋಬ್ಬರಿ 4 ಕೋಟಿ ರೂ. ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ (Dubai) ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ ಕುಟುಂಬವೊಂದರ ಲಗೇಜ್ ಬ್ಯಾಗ್‌ನಿಂದ ಅಧಿಕಾರಿಗಳು ಸುಮಾರು 479 ಸಾವಿರ ಡಾಲರ್ ನಗದನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೊಂದು ಮೌಲ್ಯದ ಹಣವನ್ನು ಅವರು ಮಡಚಿಟ್ಟ ಸೀರೆಯ (Saree) ಮಡಿಕೆಗಳೊಳಗೆ ಹಾಗೂ ಶೂಗಳೊಳಗೆ ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಚೆಂಡೆ ಬಾರಿಸಿದ ಮಮತಾ ಬ್ಯಾನರ್ಜಿ
Advertisement
Advertisement
ವರದಿಗಳ ಪ್ರಕಾರ ನವೆಂಬರ್ 2 ರಂದು 3 ಸದಸ್ಯರ ಕುಟುಂಬ ಫ್ಲೈ ದುಬೈ ವಿಮಾನ ಎಫ್‌ಝಡ್-446 ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಳ್ಳಸಾಗಣೆಯ ಸುಳಿವು ದೊರಕುತ್ತಿದ್ದಂತೆಯೇ ಏರ್ ಇಂಟೆಲಿಜೆನ್ಸ್ ಯೂನಿಟ್ ಕಾರ್ಯಾಚರಣೆ ನಡೆಸಿದೆ. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್ ಉಗ್ರ ಅಶ್ಫಾಕ್ ಆರಿಫ್ ಗಲ್ಲು ಖಾಯಂ
Advertisement
ಇಬ್ಬರು ಹಿರಿಯ ನಾಗರಿಕರು ಸೇರಿದಂತೆ 3 ಸದಸ್ಯರ ಕುಟುಂಬವನ್ನು ವಿಮಾನ ನಿಲ್ದಾಣದಲ್ಲಿ ತಡೆದು, ಹುಡುಕಾಟ ನಡೆಸಿದಾಗ ಅವರು ತಂದಿದ್ದ ಸೀರೆಯ ಮಡಿಕೆಗಳಲ್ಲಿ ಅಮೆರಿಕನ್ ಡಾಲರ್‌ನ ಭಾರೀ ಮೊತ್ತದ ನಗದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.