ಹೈದರಾಬಾದ್: 4.3 ಕೋಟಿ ರೂ. ವಂಚನೆಯ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ)ದ ಮಾಜಿ ಮ್ಯಾನೇಜರ್‍ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಹೈದರಾಬಾದ್‍ನ ಸಿಬಿಐ ನ್ಯಾಯಾಲಯ ಎಸ್‍ಬಿಐನ ಮಾಜಿ ಮ್ಯಾನೇಜರ್ ಪ್ರವೀಣ್ ಸಿಂಗ್‍ಗೆ ಗುರುವಾರ 7 ವರ್ಷದ ಶಿಕ್ಷೆಯೊಂದಿಗೆ 2 ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಪ್ರವೀಣ್ ಸಿಂಗ್ ಅಪರಿಚಿತ ವ್ಯಕ್ತಿಗಳೊಡನೆ ಸಂಚನ್ನು ರೂಪಿಸಿ ವಿಶೇಷ ಅವಧಿಯ ಠೇವಣಿ ರಶೀದಿಗಳನ್ನು ಅವಧಿಗಿಂತಲೂ ಮುಂಚಿತವಾಗಿ ರದ್ದು ಪಡಿಸಿರುವ ಆರೋಪದ ಮೇಲೆ ಹಾಗೂ ನಕಲಿ ಹೆಸರಿನಲ್ಲಿ ತನ್ನ ಸ್ವಂತ ಖಾತೆಗಳನ್ನು ತೆರೆದು, ದುರುಪಯೋಗಪಡಿಸಿಕೊಂಡಿದ್ದರೆಂದು 2010ರಲ್ಲೇ ಆರೋಪ ಹೊರಿಸಲಾಗಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಪರ ನೂತನ ಮೈಲಿಗಲ್ಲು ನೆಟ್ಟ ಶಮಿ, ಪಂತ್ ಸಂಭ್ರಮ
ಪ್ರವೀಣ್ ಸಿಂಗ್ ಇಂತಹ ಸಂಚುಗಳನ್ನು ರೂಪಿಸಿ, ಸುಮಾರು 4 ಕೋಟಿ ರೂ. ಹಣವನ್ನು ವಂಚಿಸಿದ್ದು, ಅವರ ವಿರುದ್ಧ ಸಿಬಿಐ 2011ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಯಲ್ಲಿ ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!