ಬ್ಯಾಂಕಾಕ್: ಕಳೆದ ವಾರ ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನಲ್ಲಿ (Bangkok) ಸಂಭವಿಸಿದ್ದ ಭೂಕಂಪದ ವೇಳೆ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಖಲೆಗಳನ್ನು ಕದ್ದುಕೊಂಡು ಹೋಗಲು ಯತ್ನಿಸಿದ್ದ ನಾಲ್ವರು ಚೀನಿ ಪ್ರಜೆಗಳನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಥೈಲ್ಯಾಂಡ್ ಪೊಲೀಸರು ಮಾತನಾಡಿ, ಮಾ.28 ರಂದು ಮಯನ್ಮಾರ್‌ನಲ್ಲಿ ಸಂಭವಿಸಿದ್ದ ಪ್ರಬಲವಾದ ಭೂಕಂಪದ ಪರಿಣಾಮ ಬ್ಯಾಕಾಂಕ್‌ನ ಕೆಲವು ಕಡೆಗಳಲ್ಲಿ ಕಟ್ಟಡಗಳು ಕುಸಿದಿದ್ದವು. ಈ ವೇಳೆ ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದಿತ್ತು. ಈ ವೇಳೆ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಖಲೆಗಳನ್ನು ಅಲ್ಲಿಂದ ಕೊಂಡೊಯ್ಯಲು ಪ್ರಯತ್ನಿಸಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ
ಮ್ಯಾನ್ಮಾರ್‌ನ ಮಧ್ಯಭಾಗದಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಸಂದರ್ಭದಲ್ಲಿ 30 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿದಿದೆ. ಭೂಕಂಪದ ಬಳಿಕ ಬ್ಯಾಂಕಾಕ್ ಗವರ್ನರ್ ಕುಸಿತದ ಪ್ರದೇಶವನ್ನು ವಿಪತ್ತು ವಲಯವೆಂದು ಘೋಷಿಸಿದ್ದು, ಈ ಮೂಲಕ ಅದನ್ನು ನಿರ್ಬಂಧಿತ ಪ್ರದೇಶವೆಂದು ತಿಳಿಸಲಾಗಿತ್ತು. ಆ ಪ್ರದೇಶಕ್ಕೆ ಅನುಮತಿಯಿಲ್ಲದೆ ಯಾರಿಗೂ ಪ್ರವೇಶಿಸಲು ಅವಕಾಶವಿಲ್ಲ ಎಂದು ಸೂಚಿಸಲಾಗಿತ್ತು. ಆದರೆ ಮಾ.29 ರಂದು ನಾಲ್ವರು ಚೀನೀ ಪ್ರಜೆಗಳು ಸ್ಥಳದಿಂದ 32 ದಾಖಲೆಗಳ ಫೈಲ್‌ಗಳನ್ನು ಕೊಂಡೊಯ್ಯತ್ತಿರುವ ಮಾಹಿತಿ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಓರ್ವ ಚೀನಿ ಪ್ರಜೆಯನ್ನು ವಿಚಾರಣೆ ನಡೆಸಿದಾಗ ಆತ ಕಟ್ಟಡ ನಿರ್ಮಾಣದ ಯೋಜನಾ ವ್ಯವಸ್ಥಾಪಕ ಎಂದು ತಿಳಿಸಿದ್ದಾನೆ.ಇದನ್ನೂ ಓದಿ:ಪ್ರಾರ್ಥನೆ ಮಾಡುತ್ತಿದ್ದಾಗಲೇ ಭೂಕಂಪ – 700 ಸಾವು, 60 ಮಸೀದಿಗಳಿಗೆ ಹಾನಿ: ಮ್ಯಾನ್ಮರ್ ಮುಸ್ಲಿಂ ಸಂಘಟನೆ
ಭಾನುವಾರದ ವೇಳೆಗೆ 17 ಜನರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. 76 ಜನರು ಇನ್ನೂ ಪತ್ತೆಯಾಗಿಲ್ಲ. ಆ ಪೈಕಿ ಹೆಚ್ಚಿನವರು ಕುಸಿದ ಕಟ್ಟಡದಲ್ಲಿ ನಿರ್ಮಾಣ ಕಾರ್ಮಿಕರಾಗಿದ್ದವರು. ಬದುಕುಳಿದವರನ್ನು ಪತ್ತೆಹಚ್ಚಲು ಶೋಧ ಕಾರ್ಯಗಳು ತೀವ್ರವಾಗಿ ನಡೆಯುತ್ತಿವೆ.