ನಟಿ ಕಂ ಮಾಡೆಲ್ ಗಳ ಆತ್ಮಹತ್ಯೆಗೆ ಸ್ವತಃ ಪಶ್ಚಿಮ ಬಂಗಾಳದ ಪೊಲೀಸ್ ಬೆಚ್ಚಿ ಬಿದ್ದಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ ನಾಲ್ವರು ನಟಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡೆ ಬಣ್ಣದ ಪ್ರಪಂಚದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಸರಣಿಯನ್ನು ಬೇಧಿಸಲು ಪೊಲೀಸ್ ತಂಡವನ್ನೇ ರಚಿಸಲು ಸರಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ
ಪಶ್ಚಿಮ ಬಂಗಾಲ ಮೂಲದ ಮೂವರು ನಟಿಯರು ಕೋಲ್ಕತ್ತಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದೀಗ ಬೆಂಗಾಲಿ ಮಾಡೆಲ್ ಮತ್ತು ಮೇಕಪ್ ಕಲಾವಿದೆಯೂ ಆಗಿದ್ದ ಸರಸ್ವತಿ ದಾಸ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ 18 ವರ್ಷದ ಸರಸ್ವತಿಯ ಶವವು ಕಸ್ಬಾ ಪ್ರದೇಶದ ಬೆಡಿಯಾದಂಗದಲ್ಲಿರುವ ಅವರ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ
ಇತ್ತೀಚೆಗಷ್ಟೇ ಮಂಜುಷಾ ನಿಯೋಗಿ, ಪಲ್ಲವಿ ಡೇ ಮತ್ತು ಬಿದಿಶಾ ಮಜುಂದಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಸರಸ್ವತಿ ದಾಸ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ. ಕೊಠಿಯಲ್ಲಿ ಮೊಮ್ಮಗಳ ಶವ ಕಂಡ ಅವರ ಅಜ್ಜಿಯು ಮೊಮ್ಮಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಾಗಲೇ ಅವರು ನಿಧನ ಹೊಂದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ
ಸರಸ್ವತಿ ಅವರ ಶವವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದೆ ನಿಜ. ಹಾಗಂತ ನಾವು ಅದನ್ನು ಬರೀ ಆತ್ಮಹತ್ಯೆ ಕೇಸ್ ಎಂದು ನೋಡದೇ ಬೇರೆ ದೃಷ್ಟಿ ಕೋನದಿಂದ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.