ಹಾವೇರಿಯಲ್ಲಿ ಮಳೆಗೆ 4 ಎಕರೆ ಶೇಂಗಾ ಬೆಳೆ ನಾಶ – ಲಕ್ಷಾಂತರ ರೂ. ನಷ್ಟ

Public TV
1 Min Read
haveri heavy rain Destruction of groundnut crop

ಹಾವೇರಿ: ಕಳೆದ ಮೂರು ದಿನಗಳಿಂದ ಧಾರಕಾರ ಮಳೆಯಾಗುತ್ತಿದ್ದು, ಹಾವೇರಿ (Haveri) ಜಿಲ್ಲೆಯ ಕೋಳೂರು (Koluru) ಗ್ರಾಮದಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ. ಮಳೆಯ ಅವಾಂತರಕ್ಕೆ ಅನ್ನದಾತರು ಕಂಗಾಲಾಗಿದ್ದಾರೆ.

ಭಾರೀ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಕೋಳೂರು ಗ್ರಾಮದಲ್ಲಿ ಅಪಾರ ಪ್ರಮಾಣದ ಶೇಂಗಾ ಬೆಳೆ ಹಾನಿಯಾಗಿದೆ. ಗದೀಗಯ್ಯ ಹಿರೇಮಠ ಎಂಬುವವರು 4 ಎಕರೆ ಜಮೀನಲ್ಲಿದ್ದ ಶೇಂಗಾ ಸಂಪೂರ್ಣ ಒದ್ದೆಯಾಗಿ ಕೊಳೆತು ಹೋಗಿದೆ. ಕಟಾವಿಗೆ ಬಂದ ಫಸಲು ನೀರಿನಲ್ಲಿ ಕೊಳೆತು ಜಾನುವಾರಿಗೆ ಮೇವು ಇಲ್ಲದಂತಾಗುತ್ತಿದೆ. ಲಕ್ಷಾಂತರ ರೂ. ಹಣ ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: MUDA Scam | ಮೊದಲ ಹಂತದ ತನಿಖೆ ಮುಕ್ತಾಯ – 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆ ಸೀಜ್‌

ಹಾವೇರಿ ಜಿಲ್ಲೆಯ ಎಲ್ಲಾ ಶೇಂಗಾ ಬೆಳೆಗಾರರು ಮಳೆಯಿಂದ ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಬಂದಿದೆ. ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಿಲ್ಲೆಯ ಅನ್ನದಾತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

Share This Article