ನಿಸ್ಸಾನ್ ಇಂಡಿಯಾ ಕಂಪನಿಯು ಇಂದು ಭಾರತದ ಮಾರುಕಟ್ಟೆಗೆ ಸಬ್-ಕಾಂಪ್ಯಾಕ್ಟ್ ಎಸ್ಯುವಿ ‘ಮ್ಯಾಗ್ನೈಟ್ ‘ ಅನ್ನು ಬಿಡುಗಡೆ ಮಾಡಿದೆ. ಮ್ಯಾಗ್ನೈಟ್ ಕಾರಿನ ಪ್ರಾರಂಭಿಕ ಬೆಲೆ 4.99 ಲಕ್ಷ ರೂ.ನಿಂದ 9.35 ಲಕ್ಷದವರೆಗೂ ಇದೆ. ಜನವರಿ ಒಂದರಿಂದ ಈ ಬೆಲೆಗಳು ಏರಿಕೆಯಾಗಲಿವೆ.
ಮ್ಯಾಗ್ನೈಟ್ ಕಾರು XE, XL, XV, XV ಪ್ರೀಮಿಯಂ, XV ಪ್ರೀಮಿಯಂ (O) ಅವತರಣಿಕೆಗಳಲ್ಲಿ ಲಭ್ಯವಿದೆ.
Advertisement
Big. Bold. Beautiful. The All-New #NissanMagnite is finally here! This is the SUV that you have been waiting for. Come, #IgniteYourCarisma.
To know more, visit https://t.co/5q6Gan2DMq pic.twitter.com/H4Em9E5351
— Nissan India (@Nissan_India) October 21, 2020
Advertisement
XV ಪ್ರೀಮಿಯಂ (O) ಅವತರಣಿಕೆಯಲ್ಲಿ ಎಲ್ಇಡಿ ಬೈ-ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, 16 ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಗಳು, ಸಬ್-ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲೇ ಮೊದಲ ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿಗೆ 8.0-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆ, 7.0 ಇಂಚಿನ ಟಿಎಫ್ಟಿ ಡಿಸ್ಪ್ಲೇ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಧ್ವನಿ ಗುರುತಿಸುವಿಕೆ ತಂತ್ರಜ್ಞಾನ, ಪುಶ್-ಬಟನ್ ಸ್ಟಾರ್ಟ್, ಕ್ರೂಸ್ ಕಂಟ್ರೋಲ್, ಆಲ್-ಬ್ಲ್ಯಾಕ್ ಇಂಟೀರಿಯರ್, 360 ಡಿಗ್ರಿ ಅರೌಂಡ್-ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್-ಮಾನಿಟರ್ ವ್ಯವಸ್ಥೆಗಳು ದೊರೆಯುತ್ತವೆ.
Advertisement
It's here! The all new #NissanMagnite is ready to hit the roads at Special Introductory Price of Rs 4.99 Lakh*! So what are you waiting for?
Book now and #IgniteYourCarisma – https://t.co/GvAMF00aw4 pic.twitter.com/Jz3QI0VGDw
— Nissan India (@Nissan_India) December 2, 2020
Advertisement
ನಿಸ್ಸಾನ್ ಮ್ಯಾಗ್ನೈಟ್ ಟೆಕ್ನಾಲಜಿ ಪ್ಯಾಕ್
ಮ್ಯಾಗ್ನೈಟ್ XV, XV ಪ್ರೀಮಿಯಂ ಮತ್ತು XV ಪ್ರೀಮಿಯಂ (O) ಟ್ರಿಮ್ಗಳಿಗಾಗಿ, ನಿಸ್ಸಾನ್ ಐಚ್ಛಿಕ ತಂತ್ರಜ್ಞಾನ ಪ್ಯಾಕೇಜ್ ಅನ್ನು ಸಹ ನೀಡುತ್ತಿದೆ. ವೈರ್ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಪಡಲ್ ಲ್ಯಾಂಪ್ಸ್ ಮತ್ತು ಜೆಬಿಎಲ್ ಸ್ಪೀಕರ್ಗಳನ್ನು ತಂತ್ರಜ್ಞಾನ ಪ್ಯಾಕೇಜ್ ಒಳಗೊಂಡಿದೆ. ಈಗಾಗಲೇ ಲಭ್ಯವಿರುವ ವೈಶಿಷ್ಟ್ಯಗಳ ಜೊತೆಗೆ ಈ ಪ್ಯಾಕೇಜ್ ಪಡೆಯಲು ಹೆಚ್ಚುವರಿ 39,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಮ್ಯಾಗ್ನೈಟ್ ಎರಡು ಪೆಟ್ರೋಲ್ ಎಂಜಿನ್ಗಳ ಆಯ್ಕೆಯೊಂದಿಗೆ ಲಭ್ಯವಿದೆ. 1.0-ಲೀಟರ್, ಮೂರು-ಸಿಲಿಂಡರ್, ನ್ಯಾಚುರಲೀ ಆಸ್ಪಿರೇಟೆಡ್ ಎಂಜಿನ್ ಹೊಂದಿದ್ದು 72 ಹೆಚ್ಪಿ ಶಕ್ತಿ ಉತ್ಪಾದಿಸುತ್ತದೆ. 1.0-ಲೀಟರ್, ಮೂರು-ಸಿಲಿಂಡರ್, ಟರ್ಬೊ-ಪೆಟ್ರೋಲ್ ಯುನಿಟ್, 100 ಎಚ್ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇಲ್ಲ.
Are you ready for the Big, Bold and Beautiful, all new #NissanMagnite? Get ready to #IgniteYourCarisma! Join us tomorrow: https://t.co/bsXFY0DBz6 pic.twitter.com/QmrO6jqxDe
— Nissan India (@Nissan_India) December 1, 2020
ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ಯುವಿ 300, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಾರುತಿ ಸುಜುಕಿ ವಿಟಾರಾ ಬ್ರೆಜಾ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಕಾರುಗಳೊಂದಿಗೆ ಸ್ಪರ್ಧೆಗೆ ಇಳಿಯಲಿದೆ.