ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಎಟಿಎಂ ವಾಹನಗಳಲ್ಲಿ ಸಾಗಿಸುತ್ತಿದ್ದ 4.75 ಕೋಟಿ ರೂ. ಹಣವನ್ನು ಹೆಬ್ಬಗೋಡಿ ಪೊಲೀಸರು ಸೀಜ್ ಮಾಡಿದ್ದಾರೆ.
ರೈಟರ್ಸ್ ಕಂಪನಿಯ ಮೂರು ವಾಹನಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ 10 ಲಕ್ಷದಷ್ಟು ಹೆಚ್ಚುವರಿ ಹಣ ಸಾಗಾಟ ಹಿನ್ನೆಲೆ ದೂರು ದಾಖಲಾಗಿತ್ತು. ಹಣ ಸಾಗಿಸಲು ಆರ್‌ಬಿಐ (RBI) ಮಾರ್ಗಸೂಚಿಯನ್ನು ಪಾಲನೆ ಮಾಡಿಲ್ಲ. ನಿಯಮ ಉಲ್ಲಂಘಿಸಿದ ಪರಿಣಾಮ ಎಟಿಎಂ ವಾಹನಗಳನ್ನು ವಶಕ್ಕೆ ಪಡೆದು ಹಣವನ್ನು ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ
ಆರ್‌ಬಿಐ ಮಾರ್ಗಸೂಚಿ ಮೀರಿ ಹಲವು ಬ್ಯಾಂಕ್‌ಗಳ ಹಣವನ್ನು ಎಟಿಎಂ ವಾಹನಗಳಲ್ಲಿ ಸಾಗಿಸಲಾಗುತ್ತಿತ್ತು. ವೀರಸಂದ್ರ ಸಿಗ್ನಲ್ ಬಳಿಯ ಚೆಕ್‌ಪೋಸ್ಟ್ ಬಳಿ ಹಣವನ್ನು ಸೀಜ್ ಮಾಡಲಾಗಿದೆ.
ಆರ್‌ಬಿಐ ಕ್ರಮದ ಪ್ರಕಾರ, ಒಟ್ಟು ಮೊತ್ತದ ಸ್ಕ್ಯಾನ್ ಜನರೇಟ್ ಆಗಿರಬೇಕು. ಆದರೆ ಇಲ್ಲಿ ಸಾಗಿಸುತ್ತಿದ್ದ ಮೂರು ವಾಹನಗಳಿಗೂ ಮೊತ್ತದ ಸ್ಕ್ಯಾನರ್ ಜೆನರೇಟ್ ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು