ಬೆಂಗಳೂರು: ಲಾಕ್ಡೌನ್ ವೇಳೆ ವಿದೇಶಕ್ಕೆ ರಪ್ತು ಮಾಡಲು ರಕ್ತ ಚಂದನ ಶೇಖರಿಸಿಟ್ಟಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದೆ.
ಹುಳಿಮಾವು ಬಳಿಯ ಗೋಡೌನ್ ಬಳಿ ಅಕ್ರಮವಾಗಿ ರಕ್ತ ಚಂದನವನ್ನು ಶೇಖರಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
Advertisement
Advertisement
Advertisement
ದಾಳಿ ವೇಳೆ ಆರೋಪಿಗಳಾದ ಆನಂದ್ ಕುಮಾರ್, ಅನಿಲ್ ಎಂಬುವರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿದೇಶಕ್ಕೆ ಸರಬರಾಜು ಮಾಡಲು ಬನ್ನೇರುಘಟ್ಟ ಹೊಮ್ಮದೇವನಹಳ್ಳಿ ಗೋಡನ್ ನಲ್ಲಿ ಇಟ್ಟಿರುವುದಾಗಿ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಗೋವಾದಿಂದ ಕೊರೊನಾ ನೆಗೆಟಿವ್ ವರದಿ ಇಲ್ಲದೆ ರಾಜ್ಯಕ್ಕೆ ಬಂದ ವರ- ಪೊಲೀಸರಿಂದ ನಿಶ್ಚಿತಾರ್ಥಕ್ಕೆ ಅವಕಾಶ
Advertisement
ವಿದೇಶದಲ್ಲಿ ಸರಬಾರಾಜು ಮಾಡಲು ಬೆಂಗಳೂರಿನಲ್ಲಿ ಡೀಲರ್ ಗಳನ್ನು ಹುಡುಕುತ್ತಿದ್ದಾಗಿ ಬಾಯಿಬಿಟ್ಟಿದ್ದಾರೆ. ವಿದೇಶದಲ್ಲಿ ರಕ್ತಚಂದನಕ್ಕೆ ಬಹು ಬೇಡಿಕೆ ಇದೆ. ಅದ್ದರಿಂದ ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆ ಅರಣ್ಯ ಪ್ರದೇಶದಿಂದ ಕಳ್ಳಸಾಗಣಿಕೆ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಶೇಖರಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.
ಚೀನಾದಲ್ಲಿ ಸುಗಂಧ ದ್ರವ್ಯ ವಸ್ತುಗಳು, ಗೃಹ ಬಳಕೆ ವಸ್ತುಗಳ ಬಳಕೆಗೆ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.