ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಸೋಮವಾರ ಮತ್ತಿಬ್ಬರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿದ್ದಾರೆ. ಇಂದು ಕೂಡ ಕಾಂಗ್ರೆಸ್ಸಿನ ನಾಲ್ಕೈದು ಶಾಸಕರು ರಾಜೀನಾಮೆ ನೀಡಲಿದ್ದಾರೆ.
ಈ ರಾಜೀನಾಮೆ ಪರ್ವ ಇಲ್ಲಿಗೆ ನಿಲ್ಲುವ ಸಾಧ್ಯತೆಗಳು ಇಲ್ಲ. ಇಂದು ಕೂಡ ಕಾಂಗ್ರೆಸ್ ಪಕ್ಷದ ಐದಾರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಮಾಜಿ ಸಚಿವ ರೋಷನ್ ಬೇಗ್ ಇಂದು ಬಿಜೆಪಿ ಸೇರುತ್ತೇನೆ ಎಂದು ಘೋಷಿಸಿದ್ದಾರೆ. ಇತ್ತ ನಿನ್ನೆ ರಾಜೀನಾಮೆ ಕೊಟ್ಟಿರುವ ಆರ್ ಶಂಕರ್ ಹಾಗೂ ಎಚ್ ನಾಗೇಶ್ ಈಗಾಗಲೇ ಅತೃಪ್ತರ ಬಳಗವನ್ನು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಒಟ್ಟಿನಲ್ಲಿ ಇದೀಗ ಜೊತೆಯಲ್ಲೇ ಇದ್ದೇನೆ ಎಂದು ಹೇಳುತ್ತಾ ಕೊನೆಯಲ್ಲಿ ಯಾರೆಲ್ಲ ಕೈಕೊಡ್ತಾರೋ ಎನ್ನುವ ಆತಂಕ ಕಾಂಗ್ರೆಸ್ ಪಾಳಯದಲ್ಲಿದೆ ದಟ್ಟವಾಗಿದೆ.
Advertisement
ಇಂದು ರಾಜೀನಾಮೆ ನೀಡ್ತಾರಾ..?
> ಎಂಟಿಬಿ ನಾಗರಾಜ್, ಹೊಸಕೋಟೆ(ವಸತಿ ಸಚಿವ)
> ರೋಷನ್ ಬೇಗ್, ಶಿವಾಜಿನಗರ ಶಾಸಕ
> ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ
> ಅಂಜಲಿ ನಿಂಬಾಳ್ಕರ್, ಖಾನಾಪುರ ಶಾಸಕಿ
> ಸುಬ್ಬಾರೆಡ್ಡಿ, ಬಾಗೇಪಲ್ಲಿ
> ಶ್ರೀಮಂತ ಪಾಟೀಲ್, ಕಾಗವಾಡ
Advertisement
ಇವರೆಲ್ಲರೂ ಇಂದು ರಾಜೀನಾಮೆ ನಿಡುವ ಸಾಧ್ಯತೆಗಳಿವೆ. ಇವರುಗಳ ಮಧ್ಯೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ನಡೆ ತೀವ್ರ ಕತೂಹಲ ಹುಟ್ಟಿಸಿದೆ.