ಮುಂಬೈ: ಎಟಿಎಂಗೆ ಹಣ ಅಪ್ಲೋಡ್ ಮಾಡಲು 4.25 ಕೋಟಿ ರೂ. ಹಣ ತುಂಬಿ ಬಂದಿರುವ ವ್ಯಾನ್ನೊಂದಿಗೆ ಚಾಲಕ ಪರಾರಿಯಾಗಿರುವ ಘಟನೆ ವಿರಾರ್ನ ಬೋಲಿಂಜ್ ಪ್ರದೇಶದಲ್ಲಿ ನಡೆದಿದೆ.
ಸಂಜೆ 5 ಗಂಟೆ ಸುಮಾರಿಗೆ ಅಧಿಕಾರಿಗಳು ಬ್ಯಾಂಕ್ ಎಟಿಎಂಗೆ ಹಣ ಅಪ್ಲೋಡ್ ಮಾಡಲು 4.25 ಕೋಟಿ ನಗದು ತುಂಬಿರುವ ವ್ಯಾನ್ನೊಂದಿಗೆ ಬಂದಿದ್ದರು. ಅಧಿಕಾರಿಗಳು ಹಣವನ್ನು ಅಪ್ಲೋಡ್ ಮಾಡಲು ತಯಾರು ನಡೆಸುತ್ತಿದ್ದಾಗ ವಾಹನ ಚಾಲಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಚಾಲಕ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಹಣ ತುಂಬುವ ವ್ಯಾನ್ನೊಂದಿಗೆ ಪರಾರಿಯಾಗಿದ್ದಾನೆ. ವ್ಯಾನ್ನಲ್ಲಿ ಸುಮಾರು 4.25 ಕೋಟಿ ರೂ ಹಣ ಇತ್ತು ಎಂದು ಎಟಿಎಂಗೆ ಹಣ ತುಂಬಲು ಬಂದಿರುವ ಅಧಿಕಾರಿಗಳು ಅರ್ನಾಲಾಪೊಲೀಸರಿಗೆ ತಿಳಿಸಿದ್ದಾರೆ.
Advertisement
ಸಿಬ್ಬಂದಿ ಎಟಿಎಂನಲ್ಲಿ ಹಣವನ್ನು ಅಪ್ಲೋಡ್ ಮಾಡುವಲ್ಲಿ ನಿರತರಾಗಿದ್ದಾಗ, ಚಾಲಕ ವ್ಯಾನಿನೊಂದಿಗೆ ತಪ್ಪಿಸಿಕೊಂಡಿದ್ದಾನೆ. ಆರೋಪಿ ಚಾಲಕನನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ವಿರಾರ್ ವಿಭಾಗದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರೇಣುಕಾ ಬಾಗ್ಡೆ ತಿಳಿಸಿದ್ದಾರೆ.
Advertisement