-ಡೆತ್ ನೋಟ್ ಬರೆದು, ಶೂಟ್ ಮಾಡ್ಕೊಂಡ
ಲಕ್ನೋ: ಪ್ರೇಯಸಿ ಬೇರೊಬ್ಬನನ್ನ ಮದುವೆಯಾಗಿದ್ದಕ್ಕೆ ನೊಂದ ಪ್ರಿಯಕರ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಯುವಕ ಆತ್ಮಹತ್ಯೆಗೆ ಶರಣಾಗಿದಗ್ದು, ಶನಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಕಪಸೆಟಿ ಕ್ಷೇತ್ರದ ಸರಾಂವ್ ಗ್ರಾಮದ ಅಜಯ್ ಕುಮಾರ್ ಜಯಸ್ವಾಲ್ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಜಯಸ್ವಾಲ್ ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಲಾಕ್‍ಡೌನ್ ಬಳಿಕ ಗ್ರಾಮಕ್ಕೆ ಆಗಮಿಸಿದ್ದ ಅಜಯ್ ಅಜ್ಜನ ಜೊತೆಯಲ್ಲಿಯೇ ವಾಸವಾಗಿದ್ದನು. ಅಜಯ್ ನಾಲ್ಕು ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದನು. ಕೆಲ ದಿನಗಳ ಹಿಂದೆ ಪ್ರೇಯಸಿಯ ಮದುವೆ ಬೇರೊಬ್ಬನ ಜೊತೆಯಾಗಿತ್ತು. ಇದರಿಂದ ಮಾನಸಿಕ ಒತ್ತಡದಲ್ಲಿ ಸಿಲುಕಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಶುಕ್ರವಾರ ಕುಟುಂಬಸ್ಥರೊಂದಿಗೆ ಅಜಯ್ ಊಟ ಮಾಡಿದ್ದನು. ಊಟದ ಬಳಿಕ ಬಹು ಸಮಯದವರೆಗೆ ಎಲ್ಲರ ಜೊತೆ ಮಾತನಾಡಿ ತನ್ನ ಕೋಣೆ ಸೇರಿಕೊಂಡಿದ್ದನು. ರಾತ್ರಿ ಸುಮಾರು 2 ಗಂಟೆಗೆ ಅಜಯ್ ತನ್ನ ಲೈಸೆನ್ಸ್ ಗನ್ ನಿಂದ ಶೂಟ್ ಮಾಡಿಕೊಂಡಿದ್ದಾನೆ. ಬೆಳಗ್ಗೆ ಆತನಿಗೆ ಚಹಾ ನೀಡಲು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಜಯ್ ಆತ್ಮಹತ್ಯೆಗೆ ಬಳಸಿದ್ದ ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣೆಯಲ್ಲಿ ಡೆತ್ ನೋಟ್ ಲಭ್ಯವಾಗಿದ್ದು, ಪ್ರೀತಿಯಲ್ಲಿ ನೊಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆಜಯ್ ಹೇಳಿದ್ದಾನೆ.
ಕಳೆದ ನಾಲ್ಕು ವರ್ಷಗಳಿಂದ ಅಜಯ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಸಹ ಇಬ್ಬರು ನಿರ್ಧರಿಸಿದ್ದರು ಎನ್ನಲಾಗಿದೆ. ಆದ್ರೆ ಕುಟುಂಬದವರ ಒತ್ತಡದಲ್ಲಿ ಸಿಲುಕಿದ ಯುವತಿ ಬೇರೆ ಮದುವೆ ಆಗಿದ್ದಾಳೆ ಎಂದು ವರದಿಯಾಗಿದೆ.