– ಮೊದಲು ತನ್ನ ಚಿಕ್ಕಪ್ಪನನ್ನೇ ಮದುವೆಯಾಗಿದ್ದ ಯುವತಿ
– ತಾನೇ ದೂರು ಕೊಟ್ಟು, ಪೊಲೀಸ್ ಠಾಣೆ ಸೇರಿದ ಸ್ವಪ್ನ
ಹೈದರಾಬಾದ್: ನಾಲ್ಕು ಜನ ಪುರುಷರನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಕಿಲಾಡಿ ಯುವತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯುವತಿಯನ್ನು ಸ್ವಪ್ನ ಎಂದು ಗುರುತಿಸಲಾಗಿದೆ. ಈಕೆ ಮೊದಲಿಗೆ ಆಕೆಯ ಚಿಕ್ಕಪ್ಪನನ್ನೇ ಮದುವೆಯಾಗಿದ್ದಾಳೆ. ನಂತರ ಆತ ದೈಹಿಕವಾಗಿ ಬಲವಾಗಿಲ್ಲ ಮತ್ತು ಆತನ ಬಳಿ ಹಣವಿಲ್ಲ ಎಂದು ಹೇಳಿ ಮದುವೆಯಾದ ಕೆಲವೇ ದಿನಗಳಲ್ಲಿ ಆತನನ್ನು ಬಿಟ್ಟು ಬಂದಿದ್ದಾಳೆ.
Advertisement
Advertisement
ನಂತರ ನನಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೊಂಡು ಮೊದಲ ಮದುವೆಯನ್ನು ಮುಚ್ಚಿಟ್ಟು ಪೃಥ್ವಿರಾಜ್ ಎಂಬವವರ ಜೊತೆ ಎರಡನೇ ಮದುವೆಯಾಗಿದ್ದಾಳೆ. ಆದರೆ ಈ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ ಸ್ವಪ್ನ, ಈತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೃಥ್ವಿರಾಜ್‍ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಜೊತೆಗೆ ಕೇಸ್ ಅನ್ನು ವಾಪಸ್ ಪಡೆಯಲು 25 ಲಕ್ಷ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಟ್ಟ ನಂತರ ಕೇಸ್ ವಾಪಸ್ ತೆಗೆದುಕೊಂಡಿದ್ದಾಳೆ.
Advertisement
Advertisement
ಪೃಥ್ವಿರಾಜ್‍ನ ನಂತರ ಸ್ವಪ್ನ ಆತ್ಮಕೂರ್ ನಿವಾಸಿ ಸುಧಾಕರ್ ನನ್ನು ಬಲೆಗೆ ಬೀಳಿಸಿಕೊಂಡಿದ್ದಾಳೆ. ಸುಧಾಕರ್ ಜರ್ಮನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಆತನನ್ನು ಮದುವೆ ವೆಬ್‍ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಆತನ ಜೊತೆ ಚಾಟ್ ಮಾಡಿ ಮಸೇಜ್‍ಗಳನ್ನು ಇಟ್ಟುಕೊಂಡು ಪೊಲೀಸ್‍ಗೆ ದೂರ ಕೊಡುತ್ತೇನೆ ಎಂದು ಬೆದಕರಿಗೆ ಹಾಕಿದ್ದಾಳೆ. ಜೊತೆಗೆ ಆತನ ಬಳಿಯೂ 5 ಲಕ್ಷ ಹಣವನ್ನು ಕಿತ್ತುಕೊಂಡಿದ್ದಾಳೆ.
ಸುಧಾಕರ್ ನಂತರ ಡೆನ್ಮಾರ್ಕ್‍ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ರಾಮಂಜನೇಯುಲು ಅವರನ್ನು ಪರಿಚಯ ಮಾಡಿಕೊಂಡಿದ್ದಾಳೆ. ಈತನಿಗೂ ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಆದರೆ ಈ ನಡುವೆ ಈಕೆ ನಡುವಳಿಕೆ ನೋಡಿ ಅನುಮಾನ ಪಟ್ಟ ರಾಮಂಜನೇಯುಲು ಆಕೆಗೆ ಗೊತ್ತಾಗದ ರೀತಿಯಲ್ಲಿ ಆಕೆಯನ್ನು ಬಿಟ್ಟು ಡೆನ್ಮಾರ್ಕ್‍ಗೆ ಎಸ್ಕೇಪ್ ಆಗಿದ್ದಾನೆ. ಇದರಿಂದ ಕೋಪಗೊಂಡ ಸ್ವಪ್ನ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ತನಿಖೆ ವೇಳೆ ಆಕೆಯ ಬಣ್ಣ ಬಯಲಾಗಿದೆ.
ತನಿಖೆ ವೇಳೆ ಪೊಲೀಸರಿಗೆ ಸ್ವಪ್ನಗೆ ನಾಲ್ಕು ಜನ ಗಂಡಂದಿರಿರುವುದು ಮತ್ತು ಆಕೆ ಅವರಗೆ ಬ್ಲಾಕ್‍ಮೇಲ್ ಮಾಡಿ ಹಣ ಕಿತ್ತುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸ್ವಪ್ನ ಹೆಸರು ಮತ್ತು ಫೋಟೋಗಳನ್ನು ಚೇಂಚ್ ಮಾಡಿಕೊಂಡು ನಂಬಿಸಿ ಯುವಕರಿಗೆ ಮೋಸ ಮಾಡಿದ್ದಾಳೆ. ಮದುವೆಯಾಗಿ ನಂತರ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿ ಹಣ ಮಾಡಿದ್ದಾಳೆ ಎಂದು ಹೇಳಿದ್ದಾರೆ.