ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‍ಗಳ ಖಾಸಗೀಕರಣ ವಿರೋಧಿಸಿ ಯುನೈಟೆಡ್ ಫೆÇೀರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‍ಬಿಯು) ಮಾರ್ಚ್ 15 ಮತ್ತು 16ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಬ್ಯಾಂಕ್‍ಗಳಿಗೆ ನಾಲ್ಕು ದಿನ ರಜೆ ಇರಲಿದೆ.

ಮಾರ್ಚ್ 15 ಮತ್ತು 16ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಅದಕ್ಕೂ ಎರಡು ದಿನಕ್ಕೆ ಮೊದಲೇ ಬ್ಯಾಂಕಿಂಗ್ ಸೇವೆಗಳು ಅಲಭ್ಯವಾಗಲಿವೆ. ಏಕೆಂದರೆ ಮಾರ್ಚ್ 13 ಎರಡನೇ ಶನಿವಾರವಾಗಿದ್ದು, ಮಾರ್ಚ್ 14 ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ. ಅದಾಗಿ ಎರಡು ದಿನಗಳವರೆಗೂ ಬ್ಯಾಂಕ್ ನೌಕರರ ಒಕ್ಕೂಟ ಮುಷ್ಕರಕ್ಕೆ ಕರೆ ಕೊಟ್ಟಿವೆ.
ಮುಷ್ಕರಕ್ಕೆ ಕಾರಣ ಏನು?
ಕಳೆದ ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದರು. ದೇಶದಲ್ಲಿ 1.75 ಲಕ್ಷ ಕೋಟಿ ರೂ. ಗಳಿಸುವ ಸರ್ಕಾರದ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಕೇಂದ್ರವು ಕಳೆದ ವರ್ಷ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸಿತ್ತು. 2017ರಲ್ಲಿ 27 ಇದ್ದ ಸಾರ್ವಜನಿಕರ ಬ್ಯಾಂಕ್ ಗಳ ಸಂಖ್ಯೆಯು ಮಾರ್ಚ್ ವೇಳೆಗೆ 12ಕ್ಕೆ ಇಳಿಸಿತು.



