ಬೆಂಗಳೂರು: ವಾಯುಭಾರ ಕುಸಿತ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
24 ಗಂಟೆಗಳ #ಕರ್ನಾಟಕದ ಮಳೆ ನಕ್ಷೆ: 10th ಜೂನ್ 2020ರ 8.30AM ರಿಂದ 11th ಜೂನ್ 2020 ರ 8.30AM ರವರೆಗೆ, ಅತ್ಯಧಿಕ 238.5 ಮಿಮೀ @ಉಡುಪಿ_ಬಡಾನಿಡಿಯೂರು. pic.twitter.com/kGw7JU6kpS
— Karnataka State Natural Disaster Monitoring Centre (@KarnatakaSNDMC) June 11, 2020
ರಾಜ್ಯದಲ್ಲಿ ಅಗತ್ಯ ಇರುವಷ್ಟು ವಾಡಿಕೆ ಮಳೆ ಈ ಒಂದು ವಾರದಲ್ಲಿ ಬೀಳುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದಿರುವುದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾಗದ ರಾಜ್ಯದ ಹಲವು ಕಡೆ ಮಳೆಯಾಗಲಿದೆ ಎಂದು ಅವರು ತಿಳಿಸಿದರು.