ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ನೌಕರರ ನಾಲ್ಕು ದಿನದ ಮುಷ್ಕರದಿಂದ ಪ್ರಯಾಣಿಕರು ಇನ್ನಿಲ್ಲದಂತೆ ಪರದಾಡಿದ್ರೆ, ಮತ್ತೊಂದೆಡೆ ಪ್ರತಿಭಟನೆಯಿಂದ್ ಬಸ್ ಚಾಲನೆಯಾಗದ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆ ಬರೋಬ್ಬರಿ 14 ಕೋಟಿ ಅದಾಯ ನಷ್ಟ ಆಗಿದೆ.
ಬೆಳಗಾವಿ, ಚಿಕ್ಕೋಡಿ, ಶಿರಸಿ, ಬಾಗಲಕೋಟೆ, ಗದಗ, ಹಾವೇರಿ, ಹುಬ್ಬಳ್ಳಿ ಧಾರವಾಡ ಹಾಗೂ ನಗರ ಸಾರಿಗೆ ಸೇರಿದಂತೆ 6 ಜಿಲ್ಲೆಗಳ 9 ವಿಭಾಗಗಳನ್ನೊಳಗೊಂದ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಪ್ರತಿನಿತ್ಯ 4,075 ಬಸ್‍ಗಳು ಕಾರ್ಯಾಚರಣೆ ನಡೆಸುತ್ತವೆ.
Advertisement
Advertisement
ಪ್ರತಿದಿನ ಕನಿಷ್ಠವೆಂದರೂ 4 ಕೋಟಿ ಆದಾಯ ಬರೋ ವಾಯುವ್ಯ ಸಾರಿಗೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಸ್ಸುಗಳು ಸಂಚರಿಸದ ಪರಿಣಾಮ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗಿದೆ.
Advertisement
ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಮಧ್ಯೆಯೂ ಸೋಮವಾರ ಬೆಳಗ್ಗಿನಿಂದ ಕೆಲ ಬಸ್ ಸಂಚಾರ ಆರಂಭವಾದರೂ ನಿರೀಕ್ಷಿತ ಮಟ್ಟದಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಸೋಮವಾರ ಅರ್ಧದಷ್ಟು ಆದಾಯ ಬಂದ್ರು ನಾಲ್ಕು ದಿನದ ಮುಷ್ಕರದಿಂದ ವಾಯುವ್ಯ ಸಾರಿಗೆ ಸಂಸ್ಥೆಗೆ ಸರಾಸರಿ 14 ರಿಂದ 15 ಕೋಟಿ ರೂಪಾಯಿ ಆದಾಯ ನಷ್ಟ ಆದಂತಾಗಿದೆ.