ಪುಣೆ: ಪ್ರಸಿದ್ದ್ ಕೃಷ್ಣ, ಶಾರ್ದೂಲ್ ಠಾಕೂರ್ ಅವರ ಮಾರಕ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 66 ರನ್ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
318 ರನ್ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಪತನಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್ 251 ರನ್ಗಳಿಗೆ ಆಲೌಟ್ ಆಯ್ತು.
Advertisement
Advertisement
ಜಾನಿ ಬೈರ್ಸ್ಟೋವ್ ಹಾಗೂ ಜೇಸನ್ ರಾಯ್ ಮೊದಲ ವಿಕೆಟಿಗೆ 14.2 ಓವರ್ಗಳಲ್ಲಿ 135 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಮಾರಕ ಬೌಲಿಂಗ್ಗೆ ಇಂಗ್ಲೆಂಡಿನ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್ ಪಾಂಡ್ಯ
Advertisement
ಪ್ರಸಿದ್ಧ್ ಕೃಷ್ಣ 8.1 ಓವರ್ ಎಸೆದು 1 ಮೇಡನ್ 54 ರನ್ ನೀಡಿ 4 ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್ 6 ಓವರ್ ಎಸೆದು 37 ರನ್ ನೀಡಿ 3 ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್ 2 ವಿಕೆಟ್, ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.
Advertisement
ಜೇಸನ್ ರಾಯ್ 46 ರನ್(35 ಎಸೆತ, 7 ಬೌಂಡರಿ, 1 ಸಿಕ್ಸರ್), ಜಾನಿ ಬೈರ್ಸ್ಟೋವ್ 94 ರನ್(66 ಎಸೆತ, 6 ಬೌಂಡರಿ, 7 ಸಿಕ್ಸರ್) ನಾಯಕ ಇಯಾನ್ ಮಾರ್ಗನ್ 22 ರನ್, ಮೋಯಿನ್ ಆಲಿ 30 ರನ್ ಗಳಿಸಿ ಔಟಾದರು. 98 ರನ್ (106 ಎಸೆತ, 11 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾಗಿದ್ದ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Superb bowling display by #TeamIndia ???????? after ???????????????????????????? got off to a rollicking start ????????
India win by 6️⃣6️⃣ runs and take a 1-0 lead in the 3-match ODI series #INDvENG @Paytm
Scorecard ???? https://t.co/MiuL1livUt pic.twitter.com/0m58T6SdKq
— BCCI (@BCCI) March 23, 2021
ಪ್ರಸಿದ್ಧ್ ಕೃಷ್ಣ ದಾಖಲೆ: ಇಲ್ಲಿಯವರೆಗೆ ಭಾರತದ ತಂಡದಲ್ಲಿ ಪದಾರ್ಪಣೆಗೈದ ಪಂದ್ಯದಲ್ಲಿ ಯಾರೂ 4 ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ 4 ವಿಕೆಟ್ ಕೀಳುವ ಮೂಲಕ ಪ್ರಸಿದ್ಧ್ ಕೃಷ್ಣ ಭಾರತದ ಪರ ದಾಖಲೆ ನಿರ್ಮಿಸಿದ್ದಾರೆ.
Superb start for @prasidh43! ????????
A debut to remember ????#TeamIndia #INDvENG @Paytm pic.twitter.com/nqLxrznfWh
— BCCI (@BCCI) March 23, 2021