Connect with us

Cricket

4 ವರ್ಷದ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ

Published

on

– ಪತಿ ಮ್ಯಾಟ್‍ಗೆ ಡಿವೋರ್ವ್ ನೀಡಿದ ಕ್ರಿಕೆಟ್ ಆಟಗಾರ್ತಿ

ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ತಮ್ಮ ಪತಿ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರಿಗೆ ವಿಚ್ಛೇದನ ನೀಡಿದ್ದಾರೆ.

ಎಲ್ಲಿಸ್ ಪೆರ್ರಿ ಹಾಗೂ ಮ್ಯಾಟ್ ಟೂಮುವಾ ಅವರು 2015ರಲ್ಲಿ ಮದುವೆಯಾಗಿದ್ದರು. ಈ ವರ್ಷದ ಮೊದಲಿನಿಂದಲೂ ಎಲ್ಲಿಸ್ ಪೆರ್ರಿ ಹಾಗೂ ಮ್ಯಾಟ್ ಟೂಮುವಾ ಅವರ ನಡುವೆ ದಾಂಪತ್ಯ ಜೀವ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಪೆರ್ರಿ ಮತ್ತು ಮ್ಯಾಟ್ ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

View this post on Instagram

🌏

A post shared by Ellyse Perry (@ellyseperry) on

ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೆರ್ರಿ ಹಾಗೂ ಮ್ಯಾಟ್, ನಾವಿಬ್ಬರೂ ಸೇರಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದೇವೆ. ಇನ್ನೂ ಮುಂದೆ ನಮ್ಮ ಜೀವನವನ್ನು ನಾವು ಬೇರೆ ಬೇರೆಯಾಗಿ ಮಾಡಲಿದ್ದೇವೆ. ಎಲ್ಲರಿಗೂ ಅವರ ಅವರ ಜೀವದಲ್ಲಿ ವೈಯಕ್ತಿಕ ಸಮಯ ಎಂದು ಇರುತ್ತದೆ. ಈ ಕಾರಣದಿಂದ ನಾವಿಬ್ಬರು ವಿಚ್ಛೇದನ ಪಡೆಯಲು ತೀರ್ಮಾನ ಮಾಡಿದ್ದೇವೆ. ಪರಸ್ಪರ ಒಪ್ಪಿಗೆ ಮೇರೆ ಈ ವರ್ಷದ ಆರಂಭದಲ್ಲೇ ನಾವು ಬೇರೆ ಇರಲು ನಿರ್ಧರಿಸಿದ್ದವು ಎಂದು ಹೇಳಿದ್ದಾರೆ.

View this post on Instagram

When things get too competitive 🛑🤢 @m.toomua

A post shared by Ellyse Perry (@ellyseperry) on

ಇತ್ತೀಚೆಗೆ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಪೆರ್ರಿ ತನ್ನ ಭಾಷಣದಲ್ಲಿ ಟೂಮುವಾ ಅವರನ್ನು ಉಲ್ಲೇಖಿಸದ ಕಾರಣ ಈ ವರ್ಷದ ಆರಂಭದಿಂದಲೂ ಇವರ ದಾಂಪತ್ಯ ಜೀವನದ ಬಗ್ಗೆ ಉಹಾಪೋಹಗಳು ಮೂಡಿದ್ದವು. ಆದರೆ ಈ ವದಂತಿಯನ್ನು ದಂಪತಿ ನಿರಾಕರಿಸಿದ್ದರು. ಆದರೆ ಇಂದು ಅವರೇ ನಾವಿಬ್ಬರು ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಪೆರ್ರಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಆಡಿದರೆ, ಟೂಮುವಾ ವೃತ್ತಿಪರ ರಗ್ಬಿ ತಂಡದ ಮೆಲ್ಬೋರ್ನ್ ರೆಬೆಲ್ಸ್ ಪರ ಆಡುತ್ತಾರೆ.

ಪೆರ್ರಿ ಮತ್ತು ಟೂಮುವಾ 2015 ರಲ್ಲಿ ಮದುವೆಯಾಗುವ ಮೊದಲು 2013ರಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಪೆರ್ರಿ ಆಸ್ಟ್ರೇಲಿಯಾದ ಮಹಿಳಾ ತಂಡದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 2020ರ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ನಡೆದ ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರ ಮಂಡಿಗೆ ಗಾಯವಾಗಿ ಕ್ರಿಕೆಟ್‍ನಿಂದ ದೂರು ಉಳಿದಿದ್ದರು.

ಪೆರ್ರಿ ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾದ ಪರವಾಗಿ ಇದುವರೆಗೆ 8 ಟೆಸ್ಟ್, 112 ಏಕದಿನ ಮತ್ತು 120 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ 624, ಏಕದಿನದಲ್ಲಿ 3,022 ಮತ್ತು ಟಿ-20ಯಲ್ಲಿ 1,218 ರನ್ ಗಳಿಸಿದ್ದಾರೆ. ಮೂರು ಮಾದರಿಯಲ್ಲಿ ಒಟ್ಟು 297 ವಿಕೆಟ್‍ ಪಡೆದಿದ್ದಾರೆ.

Click to comment

Leave a Reply

Your email address will not be published. Required fields are marked *