ಮಂಗಳೂರು/ ಉಡುಪಿ : ಕರಾವಳಿಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಜುಲೈ 14 ರವರೆಗೂ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೂರು ಜಿಲ್ಲೆಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
Advertisement
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಉತ್ತಮ ಮಳೆಯಾಗಿದೆ. ಸಂಜೆ ಬಳಿಕ ಆರಂಭಗೊಂಡ ಮಳೆ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ.
Advertisement
Advertisement
ಪಶ್ಚಿಮ ಘಟ್ಟದಲ್ಲೂ ಹೆಚ್ಚಿನ ಮಳೆಯಾಗಿದ್ದು ಮಳೆನೀರು ಸಮುದ್ರ ಸೇರಲು ಜಿಲ್ಲೆಯ ಜೀವನದಿ ಸೇರಿದಂತೆ ಎಲ್ಲಾ ನದಿಗಳಲ್ಲಿ ಹರಿದು ಬರುತ್ತಿದೆ. ನೇತ್ರಾವತಿ ನದಿಯಲ್ಲಿ ಮಳೆ ನೀರು ರಭಸದಿಂದ ಹರಿಯುತ್ತಿದ್ದು ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
Advertisement
ಉಡುಪಿಯಲ್ಲೂ ಮಳೆ: ಮಾನ್ಸೂನ್ ಸಮ ಪ್ರಮಾಣದಲ್ಲಿ ಸುರಿಯುತ್ತಿದ್ದು, ಕೃಷಿ- ಬೇಸಾಯ ಚಟುವಟಿಕೆಗೆ ಸಹಾಯ ಮಾಡಿಕೊಟ್ಟಿದೆ. ಕಾಪು ತಾಲೂಕಿನಲ್ಲಿ ಕಳೆದ ರಾತ್ರಿ ವಿಪರೀತ ಮಳೆಯಾಗಿದೆ. ಉಡುಪಿ ನಗರ ಭಾಗದಲ್ಲಿ ಭಾರೀ ಮಳೆಯಾದ ಕಾರಣ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಕೆಲವೆಡೆ ಒಳ ಚರಂಡಿಯಲ್ಲಿ ಕಸಕಡ್ಡಿ ಸಿಕ್ಕಿ ಕೃತಕ ನೆರೆ ಸೃಷ್ಟಿಸಿದೆ. ಸಮುದ್ರ ಪ್ರಕ್ಷುಬ್ಧ ಆಗಿದ್ದು, ನದಿ ಸಾಗರ ತೀರದಲ್ಲೂ ಅಲರ್ಟ್ ಘೋಷಿಸಲಾಗಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 36 ಮಿಲಿ ಮೀಟರ್ ಮಳೆ ಬಿದ್ದಿದೆ. ಕಾಪು ತಾಲೂಕಿನ ಇನ್ನಾ ಗ್ರಾಮದಲ್ಲಿ ಅತೀ ಹೆಚ್ಚು 138 ಮಿಲಿ ಮೀಟರ್ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ನಾಳೆ ಕೂಡಾ ಆರೆಂಜ್ ಅಲರ್ಟ್ ಮುಂದುವರರಿಯಲಿದೆ.