ಸಿಡ್ನಿ: ಪಂದ್ಯದ ವೇಳೆ ರನ್ ಕದಿಯಲು ಯತ್ನಿಸಿದ ಆಟಗಾರ ರನೌಟ್ ಎಂದು 3ನೇ ಅಂಪೈರ್ ತೀರ್ಪು ನೀಡಿದ್ರು ಎದುರಾಳಿ ತಂಡದ ಆಟಗಾರರು ಮತ್ತೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದ ಘಟನೆ ಆಸೀಸ್ ಬಿಗ್ ಬ್ಯಾಶ್ ಲೀಗ್ ಆರಂಭಿಕ ಪಂದ್ಯದಲ್ಲಿ ನಡೆದಿದೆ.
ಲೀಗ್‍ನ ಆರಂಭಿಕವಾಗಿ ಇಂದು ಆಡಿಲೇಡ್ ಸ್ಟ್ರೇಕರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟಿಂಗ್ ನಡೆಸುತ್ತಿದ್ದ 13 ನೇ ಓವರ್ 3ನೇ ಎಸೆತದಲ್ಲಿ ಜೇಮ್ಸ್ ಪ್ಯಾಟಿನ್‍ಸನ್ ರನ್ ಕದಿಯಲು ಯತ್ನಿಸಿದರು. ಈ ವೇಳೆ ರನೌಟ್ ಮಾಡಲು ಯತ್ನಿಸಿದ ಆಡಿಲೇಡ್ ತಂಡದ ಆಟಗಾರರು ಅಂಪೈರ್ ಗೆ ಮನವಿ ಸಲ್ಲಿಸಿದರು.
Advertisement
Advertisement
ಆಡಿಲೇಡ್ ತಂಡದ ಆಟಗಾರರ ಮನವಿ ಸ್ವೀಕರಿಸಿದ ಆನ್‍ಫೀಲ್ಡ್ ಅಂಪೈರ್ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದರು. ಈ ವೇಳೆ ದೃಶ್ಯಗಳನ್ನ ಪರಿಶೀಲನೆ ನಡೆಸಿದ 3ನೇ ಅಂಪೈರ್ ರನೌಟ್ ಆಗದಿದ್ದರು ಔಟ್ ಎಂದು ತೀರ್ಪು ನೀಡಿದರು. ಇದನ್ನು ಕಂಡ ಜೇಮ್ಸ್ ಪ್ಯಾಟಿನ್‍ಸನ್ ಕ್ಷಣ ಕಾಲ ಶಾಕ್ ಆಗಿ ಮೈದಾನದಲ್ಲೇ ನಿಂತರು. ದೃಶ್ಯಗಳಲ್ಲಿ ಬ್ಯಾಟ್ಸ್ ಮನ್ ಔಟಾದಿದ್ದನ್ನು ಗಮನಿಸಿದ ಆಡಿಲೇಡ್ ಸ್ಟ್ರೇಕರ್ಸ್ ತಂಡದ ಆಟಗಾರು ತಮ್ಮ ಔಟ್ ಮನವಿಯನ್ನು ವಾಪಸ್ ಪಡೆದು ಮತ್ತೆ ಜೇಮ್ಸ್ ಪ್ಯಾಟಿನ್‍ಸನ್‍ಗೆ ಆಡಲು ಅವಕಾಶ ನೀಡಿ ಕ್ರೀಡಾ ಸ್ಫೂರ್ತಿ ಮೆರೆದರು.
Advertisement
OUT OR NOT OUT!? .. You'll struggle to see a more bizarre sequence of events on a cricket field! ???? but somehow, @_jamespattinson survives.. we think!? Thoughts @HeatBBL!?
LIVE: https://t.co/qBWBtp7D2d pic.twitter.com/BRoTDHyIsE
— Telegraph Sport (@telegraph_sport) December 19, 2018
Advertisement
ಅಂಪೈರ್ ತೀರ್ಪು ಕಂಡ ಆನ್ ಫೀಲ್ಡ್ ಅಂಪೈರ್ ಗಳಾದ ಸೈಮನ್ ಫ್ರೈ, ಪಾಲ್ ವಿಲ್ಸನ್ ಸೇರಿದಂತೆ ಪಂದ್ಯದ ವೀಕ್ಷಕ ವಿವರಣೆಕಾರರು ಕೂಡ ಒಂದು ಕ್ಷಣ ಶಾಕ್ ಒಳಗಾಗಿದ್ದರು. ಸದ್ಯ ಪಂದ್ಯ 3ನೇ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಗ್ ಡೇವಿಡ್‍ಸನ್ ತೀರ್ಪಿನ ವಿರುದ್ಧ ಕ್ರಿಕೆಟ್ ವಿಶ್ಲೇಷಕರು ಟೀಕೆ ಮಾಡಿದ್ದಾರೆ.
ಅಂಪೈರ್ ತೀರ್ಪಿನ ವಿರುದ್ಧ ಬಳಿಕ ಏನು ಮಾಡಲಾದ ಜೇಮ್ಸ್ ಪ್ಯಾಟಿನ್‍ಸನ್ ಪೆವಿಲಿಯನ್ ನತ್ತ ನಡೆಯುತ್ತಿದ್ದರು, ಆದರೆ ಆಡಿಲೇಡ್ ಸ್ಟ್ರೇಕರ್ಸ್ ಆಟಗಾರರು ಅಂಪೈರ್ ತಪ್ಪಿನ ಅರಿವಾಗಿ ಮತ್ತೆ ಆಡಲು ಅವಕಾಶ ನೀಡಿದರು. ಆಟಗಾರರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv