ತಿರುವನಂತಪುರಂ: ಮೂರನೇ ಟಿ 20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ ಭಾರತ 6 ರನ್ ಜಯಗಳಿಸುವ ಮೂಲಕ 2-1 ಅಂತರದಿಂದ ಟಿ20 ಸರಣಿಯನ್ನು ಗೆದ್ದುಕೊಂಡಿದೆ.
ಭಾರೀ ಮಳೆಯಿಂದಾಗಿ ಪಂದ್ಯವನ್ನು 8 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ರಾತ್ರಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 9.30ಕ್ಕೆ ಆರಂಭವಾಯಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 5 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತು. ಇದಕ್ಕೆ ಉತ್ತರ ನೀಡಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಪರವಾಗಿ ರೋಹಿತ್ ಶರ್ಮಾ 8, ಶಿಖರ್ ಧವನ್ 6, ಕೊಹ್ಲಿ 13, ಶ್ರೇಯಸ್ ಐಯ್ಯರ್ 6, ಮನೀಶ್ ಪಾಂಡೆ 17, ಹಾರ್ದಿಕ್ ಪಾಂಡ್ಯ ಔಟಾಗದೇ 14 ರನ್, ಧೋನಿ ಔಟಾಗದೇ 0 ರನ್ ಗಳಿಸಿದರು.
Advertisement
ನ್ಯೂಜಿಲೆಂಡ್ ತಂಡ ಇತರೇ ರೂಪದಲ್ಲಿ ಒಂದು ವೈಡ್ ನೀಡಿದರೆ ಭಾರತೀಯ ಬೌಲರ್ ಗಳು 2 ವೈಡ್ ಎಸೆದಿದ್ದರು.
Advertisement
ನ್ಯೂಜಿಲೆಂಡ್ ಪರ ಟೀಮ್ ಸೌಥಿ ಮತ್ತು ಇಶ್ ಸೋಧಿ ತಲಾ 2 ವಿಕೆಟ್ ಪಡೆದರೆ, ಟ್ರಂಟ್ ಬೌಲ್ಟ್ 1 ವಿಕೆಟ್ ಪಡೆದರು. ಭಾರತದ ಪರ ಬುಮ್ರಾ 2ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್, ಚಹಲ್, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
Advertisement