ಕೋಲಾರ: ಶಾಲೆ ಆವರಣದಲ್ಲಿದ್ದ ಸಂಪ್‌ನಲ್ಲಿ (Sump) ಬಿದ್ದು 3ನೇ ತರಗತಿ ವಿದ್ಯಾರ್ಥಿ (Student) ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಡದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರೇಂದ್ರ (9) ಮೃತ ವಿದ್ಯಾರ್ಥಿ. ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ನರೇಂದ್ರ ಇಂದು ಬೆಳಗ್ಗೆ ಶಾಲೆಗೆಂದು ಬಂದು ಬಳಿಕ ನಾಪತ್ತೆಯಾಗಿದ್ದ. ಇದನ್ನೂ ಓದಿ: ಬೆಟ್ಟದಿಂದ ಉರುಳಿ ಕಾರಿನೊಳಕ್ಕೆ ಬಿದ್ದ ಬಂಡೆ ಕಲ್ಲು – ಮಹಿಳೆ ಸಾವು
ಗ್ರಾಮದಲ್ಲೆಲ್ಲಾ ಹುಡುಕಾಟ ನಡೆಸಿದ ಪೋಷಕರು ಆತಂಕಗೊಂಡು ಎಲ್ಲೆಡೆ ವಿಚಾರಣೆ ನಡೆಸಿದರು. ಬಳಿಕ ಶಾಲೆ ಆವರಣದಲ್ಲಿರುವ ಸಂಪ್‌ನಲ್ಲಿ ವಿದ್ಯಾರ್ಥಿ ನರೇಂದ್ರ ಶವ ಪತ್ತೆಯಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ
 
					
 
		 
		 
		 
		 
		 
		 
		 
		 
		