ಜಮ್ಮು: ಗೌತಮ್ ಅವರ ಮಾರಕ ದಾಳಿಯಿಂದ ರಣಜಿ ಕ್ರಿಕೆಟ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ 167 ರನ್ ಗಳ ಭರ್ಜರಿ ಜಯದೊಂದಿಗೆ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ 330 ರನ್ ಗಳ ಕಠಿಣ ಗುರಿಯನ್ನು ಪಡೆದ ಜಮ್ಮು ಕಾಶ್ಮೀರ 62.4 ಓವರ್ ಗಳಲ್ಲಿ 192 ರನ್ ಗಳಿಗೆ ಆಲೌಟ್ ಆಯ್ತು. ಈ ಮೂಲಕ ಸತತ ಮೂರನೇ ಬಾರಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.
Advertisement
ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ !! ಮತ್ತೊಂದು ಪಂದ್ಯ ಮತ್ತೊಂದು ರೋಚಕ ಗೆಲುವು. ಈ ಗೆಲುವು ನಮಗೆ ಹೆಚ್ಚು ಸಮಾಧಾನ ನೀಡುವಂತದ್ದು. ಸೆಮಿಫೈನಲ್ಸ್ ನಲ್ಲಿ ಬಂಗಾಳದ ಎದುರು ಹೀಗೇ ನಮ್ಮ ಆಟ ಮುಂದುವರಿದರೆ ಮತ್ತೊಂದು ಫೈನಲ್ಸ್ ಮತ್ತು ಅಲ್ಲಿಂದ 9ನೇ ರಣಜಿ ಕಿರೀಟ ಅನತಿ ದೂರ !! ಹೀಗೆ ಆಡಿರಿ ಹುಡುಗರಾ !! #ಹೊಡಿಒಂಭತ್ #RanjiTrophy
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 24, 2020
Advertisement
ಭಾನುವಾರ 4 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿದ್ದ ಕರ್ನಾಟಕ ಇಂದು 106.5 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಯ್ತು. ನಿನ್ನೆ 75 ರನ್ ಗಳಿಸಿದ್ದ ಸಿದ್ಧಾರ್ಥ್ 98 ರನ್(177 ಎಸೆತ, 10 ಬೌಂಡರಿ, 2 ಸಿಕ್ಸರ್), ಶರತ್ 34 ರನ್(134 ಎಸೆತ) ಅಭಿಮನ್ಯು ಮಿಥುನ್ 10 ರನ್ ಗಳಿಸಿ ಔಟಾದರು.
Advertisement
ಆರಂಭದಿಂದಲೇ ವಿಕೆಟ್ ಕೀಳುತ್ತಾ ಸಾಗಿದ ಗೌತಮ್ ಅಂತಿಮವಾಗಿ 54 ರನ್ ನೀಡಿ 7 ವಿಕೆಟ್ ಪಡೆದು ಜಮ್ಮು ಕಾಶ್ಮೀರದ ಸೆಮಿಫೈನಲ್ ಬಾಗಿಲನ್ನು ಬಂದ್ ಮಾಡಿದರು. ಕಳೆದ ವರ್ಷ ಸೌರಷ್ಟ್ರ, 2018 ರಲ್ಲಿ ಕರ್ನಾಟಕ ವಿದರ್ಭ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಮಣಿದಿತ್ತು. ಈ ವರ್ಷ ಉತ್ತಮ ತಂಡ ಹೊಂದಿರುವ ಕಾರಣ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ.
Advertisement
Well, J&K did give us a scare throughout the first innings. But once we managed to earn the FIL, it was a one way traffic in the second innings. Siddharth and Samarth responded in style and with the ball, it was Gowtham’s juggernaut. Keep them coming, guys #RanjiTrophy #JKvKAR
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 24, 2020
ಬೆಂಗಾಳ ಮತ್ತು ಒಡಿಶಾ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಬೆಂಗಾಳ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಕರ್ನಾಟಕವನ್ನು ಎದರಿಸಲಿದೆ. ಕೋಲ್ಕತ್ತಾದಲ್ಲಿ ಈ ಪಂದ್ಯ ನಡೆಯಲಿದೆ.
ಗುಜರಾತ್ ಮತ್ತು ಸೌರಷ್ಟ್ರ ನಡುವೆ ಮತ್ತೊಂದು ಸೆಮಫೈನಲ್ ಪಂದ್ಯ ನಡೆಯಲಿದೆ. ಫೆ.29 ರಿಂದ ಮಾರ್ಚ್ 4 ರವರೆಗೆ ಈ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ.
There you go !! It’s an emphatic 167 runs victory for Karnataka against J&K. Gowtham wrecked havoc with his 7 wkts and JK had no answers. With this win, Karnataka enter the semis in style for the third consecutive time, in the #RanjiTrophy. Two more hurdles to go #JKvKAR
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 24, 2020
ಸಂಕ್ಷಿಪ್ತ ಸ್ಕೋರ್
ಕರ್ನಾಟಕ – 206 ಮತ್ತು 316
ಜಮ್ಮು ಕಾಶ್ಮೀರ – 192 ಮತ್ತು 163