– ಕಿಂಗ್ ಕೊಹ್ಲಿ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದ ಟೀಂ ಭಾರತದ 2ನೇ ನಾಯಕ ರಾಹುಲ್
ಪರ್ಲ್: ಸಂಜು ಸ್ಯಾಮ್ಸನ್ ಅವರ ಚೊಚ್ಚಲ ಶತಕ ಹಾಗೂ ಅರ್ಷ್‌ದೀಪ್ ಸಿಂಗ್ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ. ಈ ಸರಣಿ ಗೆಲುವು ಕೆ.ಎಲ್ ರಾಹುಲ್ ನಾಯಕತ್ವಕ್ಕೆ ಮತ್ತಷ್ಟು ಬಲ ನೀಡಿದೆ.
???????????????????????????? ????
Congratulations to the @klrahul-led side on winning the #SAvIND ODI series 2-1 ????????#TeamIndia pic.twitter.com/QlaAVLdh6P
— BCCI (@BCCI) December 21, 2023
Advertisement
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಹರಿಣರ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾದ 2ನೇ ನಾಯಕ ಎಂಬ ಖ್ಯಾತಿಯನ್ನೂ ರಾಹುಲ್ ಗಳಿಸಿದ್ದಾರೆ. ಇದರೊಂದಿಗೆ ಲೆಜೆಂಡ್ ಎಂ.ಎಸ್ ಧೋನಿ ಅವರ ಟ್ರೆಂಡನ್ನೇ ಮುಂದುವರಿಸಿ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಗಣ್ಯರಿಂದ ಸರಣಿ ಟ್ರೋಫಿ ಪಡೆಯುತ್ತಿದ್ದಂತೆ ಅದನ್ನು ಸಹ ಆಟಗಾರ ರಿಂಕು ಸಿಂಗ್‌ಗೆ ನೀಡಿದ್ದಾರೆ. ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗಲು ಕೆ.ಎಲ್ ರಾಹುಲ್ ಕೊನೆಯಲ್ಲಿ ನಿಂತು ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದಾರೆ. ಇದು ಧೋನಿ ಅಭಿಮಾನಿಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
Advertisement
ಪರ್ಲ್‌ನ ಬೋಲೆಂಡ್ ಪಾರ್ಕ್‌ನಲ್ಲಿ ನಡೆದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 297 ರನ್‌ಗಳ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಂಡಿತ್ತಾದರೂ ಬಳಿಕ ಭಾರತದ ಸಂಘಟಿತ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ 45.5 ಓವರ್‌ಗಳಲ್ಲಿ 218 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಭಾರತ 78 ರನ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿ ಕೈವಶ ಮಾಡಿಕೊಂಡಿತು.
Advertisement
ಟೋನಿ ಡಿ ಜಾರ್ಜಿ ಅರ್ಧಶತಕ:
2ನೇ ಪಂದ್ಯದಲ್ಲಿ ಹರಿಣರ ಪರ ಶತಕ ಸಿಡಿಸಿದ್ದ ಟೋನಿ ಡಿ ಜಾರ್ಜಿ ಅವರು 3ನೇ ಪಂದ್ಯದಲ್ಲಿಯೂ ಅತ್ಯುತ್ತಮ ಫಾರ್ಮ್ ಮುಂದುವರಿಸಿದರು. ಅಕ್ಷರ್ ಪಟೇಲ್ ಅವರ ಬೌಲಿಂಗ್‌ನಲ್ಲಿ ಒಂದು ಜೀವ ದಾನ ಪಡೆದಿದ್ದ ಟೋನಿ ಡಿ ಜಾರ್ಜಿ 87 ಎಸೆತಗಳಲ್ಲಿ 81 ರನ್ (3 ಸಿಕ್ಸರ್, 6 ಬೌಂಡರಿ) ಗಳಿಸಿ ಸತತ 2ನೇ ಶತಕ ಪೂರೈಸುವ ಮುನ್ಸೂಚನೆ ನೀಡಿದ್ದರು. ಆದ್ರೆ, ಇದಕ್ಕೆ ಅರ್ಷ್‌ದೀಪ್ ಸಿಂಗ್ ಬ್ರೇಕ್ ಹಾಕಿದರು. ನಾಯಕ ಏಡೆನ್ ಮಾರ್ಕ್ರಮ್ ಅನಗತ್ಯವಾಗಿ ರಿವರ್ಸ್ ಸ್ವೀಪ್ ತೆಗೆದುಕೊಳ್ಳಲು ಯತ್ನಿಸಿ ಸುಲಭ ಕೀಪರ್ ಕ್ಯಾಚ್‌ಗೆ ತುತ್ತಾದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಭಾರತೀರ ದಾಳಿ ಎದುರಿಸುವಲ್ಲಿ ವಿಫಲರಾದರು.
ಇನ್ನುಳಿದಂತೆ ರೀಜಾ ಹೆಂಡ್ರಿಕ್ಸ್ 19 ರನ್, ರಾಸ್ಸಿ ವಾನ್ ಡೇರ್ ಡುಸ್ಸೆನ್ 2 ರನ್, ಹೆನ್ರಿಚ್ ಕ್ಲಾಸೆನ್ 21 ರನ್, ಡೇವಿಡ್ ಮಿಲ್ಲರ್ 10 ರನ್, ವಿಯಾನ್ ಮುಲ್ಡರ್ 1 ರನ್, ಕೇಶವ್ ಮಹಾರಾಜ್ 14 ರನ್, ಬ್ಯೂರಾನ್ ಹೆಂಡ್ರಿಕ್ಸ್ 18 ರನ್, ಲಿಜಾಡ್ ವಿಲಿಯಮ್ಸ್ 2 ರನ್ ಗಳಿಸಿದ್ರೆ ನಾಂದ್ರೆ ಬರ್ಗರ್ 1 ರನ್ ಗಳಿಸಿ ಅಜೇಯರಾಗುಳಿದರು.
ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಅರ್ಷ್‌ದೀಪ್ ಸಿಂಗ್ 4 ವಿಕೆಟ್ ಕಿತ್ತ ಸಾಧನೆ ಮಾಡಿದರೆ, ವಾಷಿಂಗ್ಟನ್ ಸುಂದರ್ ಹಾಗೂ ಅವೇಶ್ ಖಾನ್ ತಲಾ 2 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತ್ತು. ಸ್ಫೋಟಕ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಹುಟ್ಟಿಸಿದ್ದ ರಜತ್ ಪಾಟಿದಾರ್ 22 ರನ್ ಗಳಿಸಿ ಔಟಾಗುತ್ತಿದ್ದಂತೆ, ಸತತ 2 ಅರ್ಧಶತಕ ಗಳಿಸಿದ್ದ ಸಾಯಿ ಸುದರ್ಶನ್ 10 ರನ್‌ಗೆ ಔಟಾದರು. 3ನೇ ವಿಕೆಟ್‌ಗೆ ಕೆ.ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಅಷ್ಟರಲ್ಲಿ 35 ಎಸೆತಗಳಲ್ಲಿ 21 ರನ್ ಗಳಿಸಿದ್ದ ರಾಹುಲ್ ಔಟಾಗಿ ಪೆವಿಲಿಯನ್‌ಗೆ ಮರಳಿದರು.
ಸಂಜು ಶತಕ-ತಿಲಕ್ ಅರ್ಧಶತಕ:
4ನೇ ವಿಕೆಟ್‌ಗೆ ಜೊತೆಯಾದ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಎಡಗೈ-ಬಲಗೈ ಕಾಂಬಿನೇಷನ್‌ನಲ್ಲಿ ಹರಿಣ ಪಡೆಯ ಬೌಲರ್‌ಗಳನ್ನು ಕಾಡಿದರು. ಈ ಇಬ್ಬರು ಮಧ್ಯಮ ಓವರ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 4ನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟದ ಕೊಡುಗೆ ನೀಡಿದರು. ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದ ತಿಲಕ್ ವರ್ಮಾ ಅವರು 77 ಎಸೆತಗಳಲ್ಲಿ 52 ರನ್ ಕಲೆ ಹಾಕಿ, ಕೇಶವ್ ಮಹಾರಾಜ್ ಸ್ಪಿನ್ ದಾಳಿಗೆ ಔಟಾದರು. ಕೊನೆಯಲ್ಲಿ ರಿಂಕು ಸಿಂಗ್ 38 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು.
2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್‌ಗೆ ಇಲ್ಲಿಯವರೆಗೂ ನಿಯಮಿತವಾಗಿ ಅವಕಾಶಗಳು ಸಿಕ್ಕಿರಲಿಲ್ಲ. ಈ ಕಾರಣದಿಂದಾಗಿ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದ್ರೆ, ಇತ್ತೀಚಿನ ದಿನಗಳಲ್ಲಿ ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ಲಯ ಹೊಂದಿರುವ ಸಂಜು ಸ್ಯಾಮ್ಸನ್ ಅವರು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದೇ ರೀತಿ ಗುರುವಾರ 3ನೇ ಏಕದಿನ ಪಂದ್ಯದಲ್ಲಿಯೂ ಎದುರಿಸಿದ 114 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 108 ರನ್ ಗಳಿಸಿದರು.