ತುಮಕೂರು: ತ್ರಿವಿಧ ದಾಸೋಹಿ, ಶತಾಯುಷಿ ಶಿವಕುಮಾರ ಶ್ರೀಗಳು ಶಿವೈಕ್ಯರಾಗಿ ಇಂದಿಗೆ ಮೂರು ವರ್ಷ. ಕೋವಿಡ್ ಉಲ್ಬಣದಿಂದಾಗಿ ಅತ್ಯಂತ ಸರಳವಾಗಿ ಲಿಂಗೈಕ್ಯ ಶ್ರೀಗಳ ಸ್ಮರಣೆ ಮಾಡಲು ಶ್ರೀಮಠದಲ್ಲಿ ಸಿದ್ಧತೆ ನಡೆದಿದೆ.
Advertisement
ಸಿದ್ದಲಿಂಗ ಸ್ವಾಮಿಗಳಿಂದ ಹಳೇ ಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಆ ಬಳಿಕ ಬೆಳಗ್ಗೆ ಪ್ರಾತಃಕಾಲದಲ್ಲಿ ಶ್ರೀಗಳ ಗದ್ದಿಗೆಗೆ ಅಭಿಷೇಕ, ಪೂಜೆ, ಮಹಾಮಂಗಳಾರತಿ ನಡೆಯಿತು. ಈ ಪೂಜೆ ಹೊರತುಪಡಿಸಿದರೆ ಯಾವುದೇ ವೇದಿಕೆ ಕಾರ್ಯಕ್ರಮ, ಉತ್ಸವ, ಮೆರವಣಿಗೆ ಇರೋದಿಲ್ಲ. ಇತ್ತ ಈ ದಿನವನ್ನು ಸರ್ಕಾರ ದಾಸೋಹ ದಿನ ಎಂದು ಆಚರಣೆ ಮಾಡುವಂತೆ ಘೋಷಣೆ ಮಾಡಿದೆ.
Advertisement
Advertisement
ಸಿಎಂ ಬೊಮ್ಮಾಯಿ ಇಂದು ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದಿಗೆ ದರ್ಶನ ಪಡೆದು ದೀಪ ಬೆಳಗಿಸಿ ಸಾಂಕೇತಿಕ ದಾಸೋಹ ದಿನವನ್ನು ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ