ದಿಸ್ಪುರ್: ಅಸ್ಸಾಂನಲ್ಲಿನ ಅಕ್ರಮ ಮದರಸಾಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದಿ ಜೆಸಿಬಿಗಳ ಮೂಲಕ ನೆಲಸಮ ಮಾಡಲಾಗುತ್ತಿದೆ.
ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬುಧವಾರ ಬೊಂಗೈಗಾಂವ್‌ನಲ್ಲಿರುವ ಮದರಸಾವನ್ನು ಕೆಡವಲಾಗಿದೆ. ಈ ಶಿಕ್ಷಣ ಸಂಸ್ಥೆಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಕೆಂದ್ರವಾಗಿ ಬಳಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿಸ ಬಳಿಕ ಕೆಡವಲಾದ 3ನೇ ಮದರಸಾವಾಗಿದೆ.
Advertisement
Advertisement
ಕಳೆದ ಶುಕ್ರವಾರ ಮದರಸಾದ ಶಿಕ್ಷಕ ಮುಫ್ತಿ ಹಫ್ಜುರ್ ರೆಹೆಮಾನ್‌ನನ್ನು ಪೊಲೀಸರು ಬಂಧಿಸಿದ್ದರು. ಆತ ಅಲ್‌ಖೈದಾ ಸಂಪರ್ಕ ಹೊಂದಿರುವುದಾಗಿ ಆರೋಪಿಸಲಾಗಿದ್ದು, 2018ರಲ್ಲಿ ಮದರಸಾಗೆ ಶಿಕ್ಷಕನಾಗಿ ನೇಮಕಗೊಂಡಿದ್ದ ಎಂದು ವರದಿಯಾಗಿದೆ. ಇದನ್ನೂ ಓದಿ: ಬಲವಂತದ ಮತಾಂತರ ಆರೋಪ – ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್ ಧ್ವಂಸ
Advertisement
ಈ ಮದರಸಾವನ್ನು ಖಾಸಗಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಆದರೆ ಅದನ್ನು ಅಗತ್ಯ ನಿಬಂಧನೆಗಳು ಮತ್ತು ಪರವಾನಗಿಗಳನ್ನು ಅನುಸರಿಸದೆ ನಿರ್ಮಿಸಲಾಗಿದೆ. ಮದರಸಾದ ರಚನೆಯೂ ದುರ್ಬಲವಾಗಿದ್ದು, ಮಾನವ ವಾಸಕ್ಕೂ ಅಸುರಕ್ಷಿತವಾಗಿದೆ. ಆದ್ದರಿಂದ ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅದನ್ನು ಕೆಡವಲಾಗಿದೆ ಎಂದು ಎಸ್‌ಪಿ ಸ್ವಪ್ನನೀಲ್ ದೇಕಾ ತಿಳಿಸಿದ್ದಾರೆ.
Advertisement
#WATCH | Assam: Markazul Ma-Arif Quariayana Madrasa, located at Kabaitary Part-IV village in Bongaigaon district, being demolished
This is the 3rd Madrasa demolished by the Assam government following arrests of 37 persons including Imam and Madrasa teachers linked with AQIS/ABT pic.twitter.com/zTQiiicAne
— ANI (@ANI) August 31, 2022
ನಿನ್ನೆ ಗೋಲ್ಪಾರಾ ಜಿಲ್ಲೆಯ ಪೊಲೀಸರು ಮದರಸಾದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಬಂಧಿತ ವ್ಯಕ್ತಿಯೊಂದಿಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು. ಜಿಲ್ಲಾಡಳಿತದ ನಿರ್ದೇಶನದಂತೆ ನಾವು ಮದರಸಾವನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ಎಸ್‌ಪಿ ಸ್ವಪ್ನನೀಲ್ ದೇಕಾ ಹೇಳಿದರು. ಇದನ್ನೂ ಓದಿ: ಆ್ಯಸಿಡ್ ದಾಳಿಯಲ್ಲಿ ಬದುಕುಳಿದ 17ರ ಹುಡುಗಿ ದೆಹಲಿಗೆ ಏರ್‌ಲಿಫ್ಟ್
ಮದರಸಾವನ್ನು ಕೆಡವಲು 8 ಬುಲ್ಡೋಜರ್‌ಗಳನ್ನು ಬಳಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಮದರಸಾ ತೆರವು ಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.