ಬೀದರ್: ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) (PM Awas Yojana) ಅಡಿಯಲ್ಲಿ 2024-25ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಔರಾದ್(ಬಿ) ಹಾಗೂ ಕಮಲಗರ ತಾಲ್ಲೂಕು ಒಳಗೊಂಡು ಔರಾದ್(ಬಿ) ವಿಧಾನಸಭಾ ಕ್ಷೇತ್ರಕ್ಕೆ 3923 ಮನೆಗಳು ಮಂಜೂರಾಗಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ್ (Prabhu Chauhan) ತಿಳಿಸಿದ್ದಾರೆ.
ಔರಾದ್(ಬಿ) (Aurad) ಹಾಗೂ ಕಮಲಗರ ತಾಲ್ಲೂಕಿನಲ್ಲಿ ವಸತಿ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಮನೆಗಳನ್ನು ಕಟ್ಟಿಸಿಕೊಡುವಂತಾಗಲು ಮನೆಗಳನ್ನು ಮಂಜೂರು ಮಾಡಬೇಕೆಂದು ಈ ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ಔರಾದ್ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷೇತ್ರದ ಮಹಾಜನತೆಯ ಪರವಾಗಿ ಶಾಸಕ ಪ್ರಭು ಚವ್ಹಾಣ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನನ್ನ ಆಡಿಯೋ ಅಲ್ಲ, ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್ ಮಾಡಲು ಅರೆಸ್ಟ್: ಮುನಿರತ್ನ
Advertisement
ಪಿಎಂ ಆವಾಸ್ (ಗ್ರಾಮೀಣ) ಯೋಜನೆಯಡಿ 2024-25ನೇ ಸಾಲಿಗೆ ರಾಜ್ಯಕ್ಕೆ 2,26,175 ಮನೆಗಳನ್ನು ಮಂಜೂರು ಮಾಡಲಾಗಿದೆ. ಬೀದರ್ ಜಿಲ್ಲೆಗೆ 15,035 ಮನೆಗಳು ಮಂಜೂರಾಗಿದ್ದು, ಈ ಪೈಕಿ ಔರಾದ್(ಬಿ) ತಾಲ್ಲೂಕಿಗೆ 2286 ಹಾಗೂ ಕಮಲನಗರ ತಾಲ್ಲೂಕಿಗೆ 1,637 ಮನೆಗಳು ಸೇರಿ ಔರಾದ್(ಬಿ) ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 3,923 ಮನೆಗಳು ಮಂಜೂರಾಗಿವೆ. ಇದನ್ನೂ ಓದಿ: ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ
Advertisement
Advertisement
2018ರ ವಸತಿ ರಹಿತರ ಸಮೀಕ್ಷಾ ಪಟ್ಟಿಯಂತೆ ಆದ್ಯತೆಗೆ ಅನುಗುಣವಾಗಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ರೂ. ಹಾಗೂ ಇತರೆ ಫಲಾನುಭವಿಗಳಿಗೆ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಒಟ್ಟು 3 ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಮನೆ ಮಂಜೂರಾದ ನಂತರ ಜಿಪಿಎಸ್ ಕಳುಹಿಸಿದ ಬಳಿಕ ಕೂಡಲೇ ಮೊದಲ ಕಂತಿನ ಹಣ ಬಿಡುಗಡೆಯಾಗುತ್ತದೆ. ಮನೆ ನಿರ್ಮಾಣದ ಹಂತಗಳನ್ನು ಆಧರಿಸಿ ನಂತರದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನೂ ಓದಿ: ವಂದೇ ಮೆಟ್ರೋ ಈಗ ‘ನಮೋ ಭಾರತ್ ರೈಲು’ – ಚಾಲನೆ ನೀಡಿದ ಮೋದಿ
Advertisement