– 12 ಲಕ್ಷ ವೈದ್ಯಕೀಯ ವೆಚ್ಚ, ಉಳಿದದ್ದು ಆಸ್ಪತ್ರೆ ಸೇವಾ ಶುಲ್ಕ
ಮುಂಬೈ: ಕೊರೊನಾ ಪರಿಸ್ಥಿಯನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಗಳು ಮನಬಂದಂತೆ ಬಿಲ್ ಮಾಡುತ್ತಿರುವುದು ತಿಳಿದಿದೆ. ಇನ್ನೂ ಹಲವು ಆಸ್ಪತ್ರೆಗಳು ಹಣದ ಆಸೆಯಿಂದ ಮಾನವೀಯತೆಯನ್ನೇ ಮರೆಯುತ್ತಿವೆ. ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಆಸ್ಪತ್ರೆಯ ಒಟ್ಟು ಬಿಲ್ ಪಾವತಿಸುವ ವರೆಗೆ ಮೃತ ದೇಹವನ್ನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಯ ಪೂರ್ತಿ ಶುಲ್ಕವನ್ನು ಪಾವತಿಸುವ ವರೆಗೆ ಮಹಿಳೆಯ ಮೃತದೇಹವನ್ನು ನೀಡುವುದಿಲ್ಲ ಎಂದು ಕುಟುಂಬಸ್ಥರಿಗೆ ತಿಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮಹಿಳೆ ಗುರುವಾರ ಜೂಪಿಟರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, 39 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಕ್ಕಾಗಿ ಬರೋಬ್ಬರಿ 24 ಲಕ್ಷ ರೂ.ಗಳ ಬಿಲ್ ಮಾಡಿದೆ. ಒಟ್ಟು ಮೊತ್ತದಲ್ಲಿ ಕೇವಲ 12 ರೂ. ವೈದ್ಯಕೀಯ ವೆಚ್ಚ ಎಂದು ಹೇಳಿದೆ. ಉಳಿದ ಹಣವನ್ನು ಆಸ್ಪತ್ರೆಯ ಸೇವಾ ಶುಲ್ಕವೆಂದು ತೆಗೆದುಕೊಂಡಿದೆ. ಆರಂಭದಲ್ಲಿ ಮಹಿಳೆಗೆ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ದಾಖಲಿಸಿಕೊಳ್ಳಲಾಗಿದೆ.
Advertisement
ಇನ್ನೂ 8 ಲಕ್ಷ ರೂ.ಗಳ ಮೊತ್ತದ ಅಂತಿಮ ಕಂತು ಪಾವತಿಸದ ಕಾರಣ ಮಹಿಳೆಯ ಮೃತ ದೇಹವನ್ನು ನೀಡುವುದಿಲ್ಲ ಎಂದು ಆಸ್ಪತ್ರೆ ಆರಂಭದಲ್ಲಿ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದೆ.
Advertisement
ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಮೃತ ಮಹಿಳೆಯ ಪತಿ ಬೆಳಗ್ಗೆ ದೇಹವನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಹೀಗಾಗಿ ರಾತ್ರಿ ಇಟ್ಟುಕೊಂಡಿದ್ದೆವು. ಕೊರೊನಾ ಸೌಲಭ್ಯ ನೀಡುವ ಕುರಿತು ನಮಗೆ ತಿಳಿಸಿಲ್ಲವಾದ್ದರಿಂದ ನಾವು ಥಾಣೆ ಮುನ್ಸಿಪಲ್ ಕಾರ್ಪೊರೇಶನ್(ಟಿಎಂಸಿ)ಗೆ ಮಾಹಿತಿ ನೀಡಿದ್ದೆವು. ಅಲ್ಲದೆ ಮಹಿಳೆಗೆ ವೆಂಟಿಲೇಟರ್ ಅಗತ್ಯವಿತ್ತು. ಈ ಕುರಿತು ನಾವು ಕುಟುಂಬಸ್ಥರಿಗೆ ತಿಳಿಸಿದ್ದೆವು. ರೋಗಿಯನ್ನು ಆಸ್ಪತ್ರೆಗೆ ಕರೆ ತಂದಾಗ ಅವರ ಆಮ್ಲಜನಕ ಮಟ್ಟ ತುಂಬಾ ಕಡಿಮೆ ಇತ್ತು. ಟಿಎಂಸಿ ನಮ್ಮ ಮನವಿಗೆ ಸ್ಪಂದಿಸದಿದ್ದರೂ ಮಹಿಳೆಗೆ ಅಗತ್ಯವಿರುವ ತುರ್ತು ಆರೈಕೆಗಳನ್ನು ಮಾಡಿದ್ದೆವು ಎಂದು ತಿಳಿಸಿದೆ.
ಮಹಿಳೆಯನ್ನು ಆಗಸ್ಟ್ 17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಭಂಡಪ್ ಮೂಲದವರಾಗಿದ್ದು, ಮೂರು ಮಕ್ಕಳ ತಾಯಿ. ವೆಂಟಿಲೇಟರ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಚಿಕಿತ್ಸೆಗಾಗಿ ತಂದೆ ಸಂಬಂಧಿಕರ ಬಳಿ ಹಣ ಪಡೆದು ಆಸ್ಪತ್ರೆಗೆ ನೀಡುತ್ತಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.