386 ಪಾಸಿಟಿವ್, 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ – 40,575 ಮಂದಿಗೆ ಲಸಿಕೆ

Public TV
1 Min Read
corona vaccine students 2

ಬೆಂಗಳೂರು: ಇಂದು ಕರ್ನಾಟಕದಲ್ಲಿ 386 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 291 ಜನ ಡಿಸ್ಚಾರ್ಜ್ ಆಗಿದ್ದಾರೆ. 5 ಜನ ಕೊರೊನಾಗೆ ಬಲಿಯಾಗಿದ್ದಾರೆ.

c0f33643 1f8c 499f a5cb 6372dc70ce5d

ಇಂದು ರಾಜ್ಯದಲ್ಲಿ ಒಟ್ಟು 1,03,739 ಮಂದಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ 40,575 (ಶೇ.39)ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

c718d01b f222 4d18 8852 346369a667da

ಇಂದು ಬೀದರ್, ಕೊಪ್ಪಳ, ರಾಮನಗರ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,47,246 ಕ್ಕೆ ಏರಿಕೆ ಆಗಿದೆ. ಈ ಪೈಕಿ 9,29,058 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,882 ಸಕ್ರಿಯ ಪ್ರಕರಣಗಳಿವೆ.

e4fbc337 8784 4050 9fdf deb6d083d5a6

ಒಟ್ಟು ಇಲ್ಲಿಯವರೆಗೆ 12,287 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 125 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3,973 ಆಂಟಿಜನ್ ಟೆಸ್ಟ್, 57,467 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 61,440 ಮಂದಿಗೆ ಪರೀಕ್ಷೆ ಮಾಡಲಾಗಿದೆ.

e82ad376 7946 437c acc8 bfd97f1db2eb

ಇಂದು ಬೆಂಗಳೂರಿನಲ್ಲಿ 209 ಕೇಸ್ ವರದಿಯಾಗಿದೆ. ಮೈಸೂರು 34, ಕಲಬುರುಗಿ 23, ದಕ್ಷಿಣ ಕನ್ನಡ 20, ಬೆಳಗಾವಿ 10, ತುಮಕೂರಿನ 11 ಮಂದಿಗೆ ಸೋಂಕು ಬಂದಿದೆ. ಒಟ್ಟು 125 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 63, ಕಲಬುರಗಿ 9, ತುಮಕೂರು 8, ಹಾಸನ 5, ಉಡುಪಿ 4, ಮತ್ತು ದಕ್ಷಿಣ ಕನ್ನಡದ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *