ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್‍ಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಕೊರೊನಾ ಕೇಸ್ ಹತೋಟಿಯಲ್ಲಿದೆ. ಈ ನಡುವೆ ಬ್ಲ್ಯಾಕ್ ಫಂಗಸ್ ಕೇಸ್ ಗಳ ಸಂಖ್ಯೆ ಏರಿಕೆ ಕಂಡಿದೆ. ಪ್ರತಿದಿನ ಬ್ಲ್ಯಾಕ್ ಫಂಗಸ್ 5 ರಿಂದ 15 ಕೇಸ್ ದಾಖಲಾಗುತ್ತಿದೆ. ಇದರೊಂದಿಗೆ ಬ್ಲ್ಯಾಕ್ ಫಂಗಸ್‍ಗೆ ಸಾವನ್ನಪ್ಪುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ.
Advertisement
ಬ್ಲ್ಯಾಕ್ ಫಂಗಸ್ ಕೇಸ್ ಏರಿಕೆ ಕಾಣುತ್ತಿರುವುದು ಈಗ ಆರೋಗ್ಯ ವಲಯದಲ್ಲಿ ಆತಂಕ ಮೂಡಿಸಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 3,845 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ. ಬ್ಲ್ಯಾಕ್ ಫಂಗಸ್ ಗೆ ರಾಜ್ಯಾದ್ಯಂತ 441 ಜನ ಬಲಿಯಾಗಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿಗಿಲ್ಲ ಬಿಡುಗಡೆ ಭಾಗ್ಯ
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಹಾವಳಿ ಜೋರಿದೆ. ಇಲ್ಲಿಯವರೆಗೂ ಬೆಂಗಳೂರಿನಲ್ಲಿ 1,212 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ. ಜೊತೆಗೆ ಬ್ಲ್ಯಾಕ್ ಫಂಗಸ್‍ನಿಂದಾಗಿ ಬೆಂಗಳೂರಿನಲ್ಲಿ 149 ಜನ ಸಾವನ್ನಪ್ಪಿದ್ದಾರೆ. ಈ ಅಂಕಿಅಂಶ ಆತಂಕ ಹುಟ್ಟಿಸಿದೆ.
Advertisement
ರಾಜ್ಯದ 30 ಜಿಲ್ಲೆಗಳಲ್ಲಿ ಅತೀ ಹೆಚ್ಚು ಬ್ಲ್ಯಾಕ್ ಫಂಗಸ್ ಇರುವುದು ಬೆಂಗಳೂರು ನಗರದಲ್ಲಿ. ಬೆಂಗಳೂರಿನಲ್ಲಿ ಇದುವರೆಗೂ 1,212 ಕೇಸ್ ದಾಖಲಾಗಿದ್ದು, ವಿಕ್ಟೋರಿಯಾದಲ್ಲಿ 209 ಕೇಸ್, ಬೌರಿಂಗ್ ಆಸ್ಪತ್ರೆ 439 ಕೇಸ್, ಕೆಸಿ ಜನರಲ್ ಆಸ್ಪತ್ರೆ 7 ಕೇಸ್, ಇಂದಿರಾಗಾಂಧಿ ಆಸ್ಪತ್ರೆಯಲ್ಲಿ 3 ಕೇಸ್ ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೇಸ್ ಏರಿಕೆಯಾಗುತ್ತಿದ್ದು ಬ್ಲ್ಯಾಕ್ ಫಂಗಸ್ ನಿಯಂತ್ರಣ ಮಾಡದಿದ್ದರೆ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಡೀತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಅರಗ ಜ್ಞಾನೇಂದ್ರ