ಡೆಹ್ರಾಡೂನ್: ತರಬೇತಿ ಬಳಿಕ ಅಧಿಕೃತವಾಗಿ ಭಾರತೀಯ ಸೇನೆ ಸೇರಿದ ಕೆಡೆಟ್‍ಗಳ ಸಂಭ್ರಮದ ವಿಡಿಯೋ ಸಖತ್ ವೈರಲ್ ಆಗಿದೆ.
ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಸೇವೆಗೆ ಸೇರಲಿರುವ ಕೆಡೆಟ್‍ಗಳ ಅಂತಿಮ ಪರೇಡ್ ನಡೆಸಲಾಗಿತ್ತು. ಪರೇಡ್ ಬಳಿಕ ಯೋಧರು ಪರಸ್ಪರ ತಬ್ಬಿಕೊಂಡು ಕುಣಿದು ಕುಪ್ಪಳಿಸಿದರು. ಬಳಿಕ ವೃತ್ತಾಕಾರದಲ್ಲಿ ಸೇರಿ ಡಿಪ್ಸ್ ಹೊಡೆದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ
Advertisement
#WATCH Uttarakhand: Cadets at the Indian Military Academy (IMA) in Dehradun celebrate after their passing out parade. 382 officers are joining the Indian Army today. 459 officers took part in the parade, including 77 foreign cadets from friendly nations. pic.twitter.com/0nkI1ypTun
— ANI (@ANI) June 8, 2019
Advertisement
ಯೋಧರ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಜೈ ಹಿಂದ್, ಭಾರತ್ ಮಾತಾಕೀ ಜೈ ಎಂದು ಹೇಳಿ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Advertisement
ಈ ಮೂಲಕ 382 ಅಧಿಕಾರಿಗಳು ಭಾರತೀಯ ಸೇನೆ ಸೇರಿದ್ದಾರೆ. ಅಂತಿಮ ಪರೇಡ್‍ನಲ್ಲಿ 77 ವಿದೇಶಿಯರು ಸೇರಿದಂತೆ ಒಟ್ಟು 459 ಕೆಡೆಟ್‍ಗಳು ಭಾಗಹಿಸಿದ್ದರು.
Advertisement
Uttarakhand: 382 officers join the Indian Army today after the passing out parade at the Indian Military Academy (IMA) in Dehradun. 459 officers took part in the parade including 77 foreign cadets from friendly nations. pic.twitter.com/GrbnZtWaAY
— ANI (@ANI) June 8, 2019