ಬೀದರ್: ಅನೈತಿಕ ಸಂಬಂಧ (Illegal Relationship) ಹಿನ್ನೆಲೆಯಲ್ಲಿ ವೈರ್ ಬಿಗಿದು ಮಹಿಳೆಯ ಕೊಲೆ (Murder) ಮಾಡಿ ಬಳಿಕ ಸುಟ್ಟು (Burn) ಹಾಕಿದ ಘಟನೆ ಬೀದರ್ (Bidar) ತಾಲೂಕಿನ ಮಂದಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಬ್ಬಿನ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ತೆಲಂಗಾಣ (Telangana) ರಾಜ್ಯದ ಮೊಗಾ ಮದನೂರು ಗ್ರಾಮದ 38 ವರ್ಷದ ಮಹಿಳೆಯನ್ನು ಬೀದರ್‌ಗೆ ಕರೆದುಕೊಂಡು ಬಂದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೈದ ಆರೋಪಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳು. ಈಕೆಗೆ ಹಣ ನೀಡದ ಕಾರಣ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಆರೋಪಿ ಇನ್ನಿಬ್ಬರೊಂದಿಗೆ ಸೇರಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಕುದಿಯುವ ನೀರಿನಲ್ಲಿ ಮುಳುಗಿಸಿ ಮಗು ಕೊಂದ ಪಾಪಿ
ಕೊಲೆಗೈದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದು, ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಗದಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಅಂತರರಾಜ್ಯ ಸರಗಳ್ಳರು ಅರೆಸ್ಟ್ – ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿದ ಖಾಕಿ ಟೀಂ