38ರ ಆಂಟಿಗೆ 22 ಯುವಕನ ಜೊತೆ ಆರನೇ ಮದುವೆ

Public TV
2 Min Read
love marriage chikmagaluru

– ಇವ್ಳು ಇದೇ ಲಾಸ್ಟ್ ಮ್ಯಾರೇಜ್ ಅಂತಾಳೆ
– ಇವ್ನು ಇವಳೇ ಬೇಕು ಅಂತಾನೆ

ಚಿಕ್ಕಮಗಳೂರು: 38ರ ಆಂಟಿಯೊಬ್ಬಳು 22 ವರ್ಷದ ಯುವಕನನ್ನ ಆರನೇ ಗಂಡನಾಗಿ ಕೈಹಿಡಿದಿದ್ದಾಳೆ. ಆಕೆಗೆ ಇತನೇ ಬೇಕು ಎನ್ನುವುದು ಮುಖ್ಯವಲ್ಲ. ಆದರೆ ಈತ ಇವಳೇ ಬೇಕು, ಬಾಳು ಕೊಡುತ್ತೇನೆ ಎನ್ನುವುದು ವಿಶೇಷದಲ್ಲಿ ವಿಶೇಷ.

ಕಂಬಿಹಳ್ಳಿ ಚಂದ್ರುಗೂ ಈಕೆ ಹೆಂಡತಿ. ಹನಿಕೆ ಬಸವರಾಜನ ಪ್ರೇಮಿಯೂ ಈಕೆ. ಬೆಂಗಳೂರಿನ ಬೇಕರಿಯ ಕಿರಣನ ಮನದರಸಿಯೂ ಹೌದು. ರಮೇಶನ ರಾಧೆಯೂ ಇವಳೇ. ತುಕಾರಂನ ಮಡದಿಯೂ ಇದೇ ಗಟ್ಟಿಗಿತ್ತಿ. ಈಗ ರಂಗೇನಹಳ್ಳಿ ಚಂದ್ರುವಿನ ಚಕೋರಿ.

love marriage chikmagaluru 4

38ರ ಅಸುಪಾಸಿಗೆ ಆರನೇ ಮದ್ವೆಯಾದ ಪ್ರಿಯಾಳ ಕೊನೆ ಪ್ರೇಮಿ ವಯಸ್ಸು ಕೇವಲ 22. ಪ್ರೀತಿಗೆ ಕಣ್ಣಿಲ್ಲ ನಿಜ. ಬುದ್ಧಿಯೂ ಇಲ್ಲದಂತಾಯ್ತು. ಈಕೆ ಐದು ಮದ್ವೆಯಾಗಿ ಎರಡು ಮಕ್ಕಳಿದ್ದರೂ 38ನೇ ವಯಸ್ಸಿಗೆ ಆರನೇ ಬಾರಿ ಹಸೆಮಣೆ ಏರಿ, ಕೈಗೆ ಕರಿ ಬಳಿ ಧರಿಸಿ 22ರ ಯುವಕನ ಜೊತೆ ಸಂಸಾರ ಶುರು ಮಾಡಿದ್ದಾಳೆ.

ಈಕೆಯನ್ನ ವರಿಸಿದ 22ರ ಯುವಕ ಕೂಡ ನಂಗೆ ಇವಳೇ ಬೇಕು. ನಾನು ಇವಳ ಜೊತೆಯೇ ಇರುತ್ತೇನೆ ಎಂದಿದ್ದಾನೆ. ಅಂತಿದ್ದಾನೆ. ಇನ್ನು ತನ್ನ ಆರನೇ ಮದುವೆ ಬಗ್ಗೆ ಹೇಳಿಕೊಂಡಿರುವ ಮದುವೆ ಎಕ್ಸ್ಪರ್ಟ್ ಮೇಡಂ, ಇದೆ ಕೊನೆ ಮದುವೆ ನಾವಿಬ್ರೂ ಚೆನ್ನಾಗಿ ಇರುತ್ತೇವೆ ಎಂದು ಪ್ರಾಮಿಸ್ ಮಾಡಿದ್ದಾಳೆ ಪ್ರಿಯಾ.

love marriage chikmagaluru 2

 

ನಾನು ಈಕೆಯನ್ನ ಬೀಡೋದಿಲ್ಲ, ಒಂದು ತಿಂಗಳಿಂದ ಲವ್ ಮಾಡ್ತಿದ್ವಿ. ನಾನೇ ಈಕೆಯನ್ನ ಇಷ್ಟ ಪಟ್ಟು ಮದ್ವೆ ಆದೆ, ಈಕೆಗೊಂದು ಬಾಳು ಕೊಡ್ತೀನಿ ಅಂತಿದ್ದಾನೆ 22ರ ಲವ್ವರ್ ಬಾಯ್ ಚಂದ್ರು. ಚಂದ್ರುವಿಗೆ ಪೋಷಕರು ಇಲ್ಲ. ಈತನನ್ನು ಅಕ್ಕ ಸಾಕಿದ್ದಾರೆ.

ಅವಳಿಗೆ 5 ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ, ನಿನಗಿಂತ ದೊಡ್ಡವಳು ಎಂದು ಅಕ್ಕ ಬುದ್ಧಿವಾದ ಹೇಳಿದ್ದರೂ ನನಗೆ ಈಕೆಯೇ ಬೇಕು ಅಂತಿದ್ದಾನೆ ಮುಖದ ಮೇಲೆ ಇನ್ನು ಸರಿಯಾಗಿ ಮೀಸೆ ಮೂಡದ ಚಂದ್ರು.

love marriage chikmagaluru 3

ಈ ವರ ಮಹಾಶಯನಿಗೂ ಜಸ್ಟ್ ಮದುವೆ ವಯಸ್ಸು 21 ಮೀರಿ 22 ಆಗಿರುವ ಕಾರಣ ಇವನ ಮನೆಯವರು ಕೂಡ ಏನು ಮಾಡಲಾಗದೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಚಂದ್ರು ಮಾತ್ರ ಈಕೆಗೆ ಐದಲ್ಲ. ಇನ್ನೈದಾಗಿದ್ದರೂ ನನಗೆ ಈಕೆಯೇ ಬೇಕೆಂದು ಬಯಸಿ ಸಂಸಾರಕ್ಕೆ ಅಣಿಯಾಗಿದ್ದಾನೆ.

ತಾನು ಮದುವೆಯಾದ ಐದು ಕಡೆಯೂ ಪ್ರಿಯಾ ಒಂದಿಲ್ಲೊಂದು ಯಡವಟ್ಟು ಮಾಡಿಕೊಂಡಿದ್ದಾಳೆ. ಕೊನೆಗೆ ಐದು ಮಂದಿಯ ಜೊತೆನೂ ಸಂಬಂಧವನ್ನೇ ಕಳೆದುಕೊಂಡಿದ್ದಾಳೆ. ಈಕೆಯ ಎಲ್ಲ ಗಂಡಂದಿರು ಮದುವೆ ಸಹವಾಸ ಸಾಕಪ್ಪ ಅಂತಿದ್ದಾರೆ. ಆದ್ರೆ, 22ರ ಸರಿಯಾಗಿ ಮೀಸೆ ಮೂಡದ ಚಂದ್ರು  ಮಾತ್ರ 5 ಮದುವೆಯಾಗಿದ್ರು ನೋ ಪ್ರಾಬ್ಲಂ. ನನಗೆ ಅಂಟಿನೇ ಬೇಕು ಅಂತ 38ರ ಹರೆಯದ ಮೇಡಮ್ಮನ ಕೈಹಿಡಿದು ಸಂಸಾರಕ್ಕೆ ರೆಡಿಯಾಗಿದ್ದಾನೆ.

ಸ್ಥಳೀಯ ನಿವಾಸಿಗಳು ಈಗ ಈಕೆಗೆ ಇದೇ ಕೊನೆ ಮದುವೆಯಾಗಲಿ, ಹುಡುಗನ ಸಂಸಾರದ ನೌಕೆ ಸರಿ ದಿಕ್ಕಿನಲ್ಲಿ ಸಾಗಲಿ ಎಂದು ಶುಭ ಹಾರೈಸಿದ್ದಾರೆ.

 

love marriage chikmagaluru 1

Share This Article
Leave a Comment

Leave a Reply

Your email address will not be published. Required fields are marked *