ರಾಯಚೂರು: ವೈದ್ಯಕೀಯ ಸೀಟ್‍ಗಳ ಹಂಚಿಕೆ ವಿಚಾರದಲ್ಲಿ ಕಲಂ 371 ಜೆ ವಿಶೇಷ ಸ್ಥಾನಮಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿರುವ ನಗರದ ನವೋದಯ ಶಿಕ್ಷಣ ಸಂಸ್ಥೆ ನಿಲುವನ್ನ ಖಂಡಿಸಿ ಕಲ್ಯಾಣ ಕರ್ನಾಟಕ 371 ಜೆ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿತ್ತು. ಈ ಹಿನ್ನೆಲೆ ರಾಯಚೂರಿನಲ್ಲಿ ಬಂದ್ ನಡೆದಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಲಾ ಕಾಲೇಜು, ಬಸ್ ಸಂಚಾರ, ಅಂಗಡಿ ಮುಗ್ಗಟ್ಟು, ತರಕಾರಿ ಮಾರುಕಟ್ಟೆ, ಎಪಿಎಂಸಿ ಬಂದ್ ಮಾಡಲಾಗಿದೆ. ಸ್ವಯಂ ಪ್ರೇರಿತರಾಗಿ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ನಗರದ ಭಗತ್ ಸಿಂಗ್ ವೃತ್ತದಲ್ಲಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆದಿದೆ. ಹೋರಾಟಗಾರರು ಬೈಕ್ ರ್ಯಾಲಿ ಮೂಲಕ ಬಂದ್‍ಗೆ ಬೆಂಬಲ ಕೋರುತ್ತಿದ್ದಾರೆ. ಇದನ್ನೂ ಓದಿ: ಕಲಂ 371ಜೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ – ಮಾರ್ಚ್ 7 ರಾಯಚೂರು ಬಂದ್
ಬಂದ್ ಹಿನ್ನೆಲೆ ಯರಮರಸ್ ಬೈಪಾಸ್ ಬಳಿ ಟೈಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನಗಳ ಸಂಚಾರ ತಡೆದು ಹೋರಾಟ ನಡೆಸಿರುವ ಹಿನ್ನೆಲೆ ಸುಮಾರು ಒಂದು ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಹೋರಾಟ ನಿರತರನ್ನು ಸ್ಥಳದಿಂದ ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನಗರದ ನವೋದಯ ಮೆಡಿಕಲ್ ಕಾಲೇಜ್ 371 ಜೆ ಪ್ರಶ್ನಿಸಿ, ವೈದ್ಯಕೀಯ ಪ್ರವೇಶ ನಿರಾಕರಿಸಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ರಿಟ್ ಅರ್ಜಿ ವಾಪಸ್ ಪಡೆಯುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ. ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಿವೆ. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?