ಕೊಲಂಬೊ: ಶ್ರೀಲಂಕಾ ನೌಕಾಪಡೆಯು (Sri Lanka Navy) ಭಾನುವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 37 ಭಾರತೀಯ ಮೀನುಗಾರರನ್ನು (Indian Fishermen) ಬಂಧಿಸಿದ್ದು, ಐದು ದೋಣಿಗಳನ್ನು (Boat) ವಶಪಡಿಸಿಕೊಂಡಿದೆ.
ಗೌಪ್ಯ ಮೂಲಗಳ ಪ್ರಕಾರ, ಶ್ರೀಲಂಕಾದ ನೀರಿನಲ್ಲಿ ಚೀನಾದ ನೌಕಾಪಡೆಯ ಬೇಹುಗಾರಿಕಾ ಹಡಗು ಲಂಗರು ಹಾಕಿದ ನಂತರ ನೌಕಾಪಡೆಯು ಗಸ್ತು ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಮೊದಲನೇ ಪ್ರಕರಣದಲ್ಲಿ ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂನ (Rameswaram) 23 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸುತ್ತುವರಿದಿವೆ. ನಂತರ ಅವರನ್ನು ಬಂಧಿಸಿದ್ದು, ಅವರ ಮೂರು ದೋಣಿಗಳನ್ನು ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯುವ ಮೊದಲು ವಶಪಡಿಸಿಕೊಳ್ಳಲಾಯಿತು. ಇದನ್ನೂ ಓದಿ: ಹಾಟ್‍ಟಬ್‍ನಲ್ಲಿ ನಟ ಶವವಾಗಿ ಪತ್ತೆ
Advertisement
Advertisement
Web Stories