ಬೆಂಗಳೂರು: ರಾಜ್ಯದಲ್ಲಿ 3,604 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 89 ಮಂದಿ ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 7,699 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಸದ್ಯ ರಾಜ್ಯದಲ್ಲಿ 1,01,042 ಸಕ್ರಿಯ ಪ್ರಕರಣಗಳಿದ್ದು, ಇಂದು 89 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ ರಾಜ್ಯದಲ್ಲಿ 28,34,630 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 34,743 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.18ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ.2.46ರಷ್ಟಿದೆ.
Advertisement
Advertisement
ಒಟ್ಟಾರೆಯಾಗಿ ಇವತ್ತು 1,64,636 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನು ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ಸೋಂಕಿತನ ಸಂಪರ್ಕದಲ್ಲಿದ್ದವರೆಲ್ಲರ ವರದಿ ನೆಗೆಟಿವ್ ಬಂದಿದೆ. ಬೆಂಗಳೂನಲ್ಲಿ ಇವತ್ತು 788 ಜನಕ್ಕೆ ಸೋಂಕು ತಗುಲಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸಿಲಿಕಾನ್ ಸಿ ಟಿಯಲ್ಲಿ 63,473 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 7, ಬಳ್ಳಾರಿ 26, ಬೆಳಗಾವಿ 143, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 788, ಬೀದರ್ 8, ಚಾಮರಾಜನಗರ 54, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 126, ಚಿತ್ರದುರ್ಗ 22, ದಕ್ಷಿಣ ಕನ್ನಡ 454, ದಾವಣಗೆರೆ 118, ಧಾರವಾಡ 46, ಗದಗ 18, ಹಾಸನ 322, ಹಾವೇರಿ 13, ಕಲಬುರಗಿ 36, ಕೊಡಗು 115, ಕೋಲಾರ 101, ಕೊಪ್ಪಳ 9, ಮಂಡ್ಯ 109, ಮೈಸೂರು 478, ರಾಯಚೂರು 19, ರಾಮನಗರ 15, ಶಿವಮೊಗ್ಗ 177, ತುಮಕೂರು 116, ಉಡುಪಿ 97, ಉತ್ತರ ಕನ್ನಡ 57, ವಿಜಯಪುರ 9 ಮತ್ತು ಯಾದಗಿರಿಯಲ್ಲಿ 4ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.