ಲಕ್ನೋ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಂಗಳವಾರ ರಾತ್ರಿ ಪ್ರಧಾನಿ ಮೋದಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮಾತ್ರ ಜನರಿಗೆ ಅವಕಾಶ ನೀಡಲಾಗಿದೆ. ಹೀಗಿರುವಾಗ 20 ವರ್ಷದ ಯುವಕ ರಸ್ತೆಗೆ ಇಳಿದಿದ್ದಾರೆ.
20 ವರ್ಷದ ಯುವಕ ಅವದೇಶ್ ಮಂಗಳವಾರ ಸಂಜೆ ಉನ್ನಾವೋನಲ್ಲಿರುವ ತನ್ನ ಫ್ಯಾಕ್ಟರಿಯಿಂದ 80 ಕಿ.ಮೀ ದೂರದಲ್ಲಿರುವ ತನ್ನ ಬಾರಾಬಂಕಿ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾರೆ. ಗುರುವಾರ ಬೆಳಗ್ಗೆ ಅವದೇಶ್ ತನ್ನ ಮನೆಗೆ ತಲುಪಬಹುದು. ಸುಮಾರು 36 ಗಂಟೆಗಳ ಈ ಪ್ರಯಾಣದಲ್ಲಿ, ಅವದೇಶ್ ಒಂದು ಅಥವಾ ಎರಡು ಬಾರಿ ಹೊರತುಪಡಿಸಿ ಎಲ್ಲಿಯೂ ನಿಲ್ಲಲು ಸಾಧ್ಯವಾಗುವುದಿಲ್ಲ. ಅವದೇಶ್‍ಗೆ ಸಾಥ್ ನೀಡಲು ಉನ್ನಾವೋದ ಅದೇ ಫ್ಯಾಕ್ಟರಿಯಲ್ಲಿ ಸುಮಾರು 20 ಮಂದಿ ವೃದ್ಧರು ಹಾಗೂ ಯುವಕರು ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವದೇಶ್, ನನಗೆ ಇದು ಮಾಡಲು ಇಷ್ಟವಿಲ್ಲ. ಆದರೆ ಬೇರೆ ದಾರಿ ಇಲ್ಲ. ಆದರೆ ನಾನು ಏನೂ ಮಾಡಲಿ. ಉನ್ನಾವೋನ ಸ್ಟೀಲ್ ಫ್ಯಾಬ್ರಿಕೇಶನ್ ಕಂಪೆನಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇಷ್ಟು ದಿನ ನಾನು ಅಲ್ಲಿಯೇ ವಾಸವಿದ್ದೆ. ಆದರೆ ರಾತ್ರಿ ಮ್ಯಾನೇಜ್‍ಮೆಂಟ್ ನಮ್ಮನ್ನು ಸ್ಥಳಾಂತರಿಸಲು ಕೇಳಿದೆ. ಆಗ ಅವರು ನಮಗೆ ಇಲ್ಲಿ ಇರಬೇಡಿ ಎಂದರು. ಮನೆಗೆ ಹೋಗುವುದನ್ನು ಬಿಟ್ಟರೆ ನನಗೆ ಬೇರೆ ಯಾವ ದಾರಿ ಇಲ್ಲ. ಸಾರಿಗೆ ವ್ಯವಸ್ಥೆ ಕೂಡ ಇಲ್ಲ. ಹಾಗಾಗಿ ನಾವು ಒಂದೇ ಹಳ್ಳಿಯ ನಿವಾಸಿಗಳು. ನಾವು ಹಳ್ಳಿಗೆ ನಡೆದುಕೊಂಡು ಹೋಗಲು ನಿರ್ಧರಿಸಿದ್ದೇವೆ ಎಂದರು.
Advertisement
ಈ ಗುಂಪಿನಲ್ಲಿದ್ದ 50 ವರ್ಷದ ವ್ಯಕ್ತಿಯೊಬ್ಬರು ಮಾತನಾಡಿ, ನಮ್ಮ ಹಳ್ಳಿಯಲ್ಲಿ ಸ್ವಲ್ಪ ಆಹಾರವಿದೆ. ಆದರೆ ನನ್ನ ಕುಟುಂಬ ನನ್ನ ಆದಾಯವನ್ನು ನಂಬಿಕೊಂಡಿದೆ. ಉತ್ತರ ಪ್ರದೇಶ ಸರ್ಕಾರ ನನ್ನಂತಹವರಿಗೆ ತಿಂಗಳಿಗೆ ಒಂದು ಸಾವಿರ ರೂ. ನೀಡಲು ಯೋಜಿಸಿದೆ ಎಂಬುದನ್ನು ನಾನು ಕೇಳಿದೆ. ಆದರೆ ನಾನು ಎಲ್ಲಿಯೂ ನೋಂದಣಿಯಾಗಿಲ್ಲ. ನನ್ನ ಬಳಿ ಯಾರೂ ಕೂಡ ಬಂದಿಲ್ಲ. ನನ್ನಂತಹ ಜನರು ಕೇವಲ ಕತ್ತಲೆಯನ್ನು ನೋಡುತ್ತಾರೆ ಎಂದು ಭಾವುಕರಾದರು.
Advertisement
ನಮ್ಮ ಗುಂಪಿನಲ್ಲಿ ಇರುವವರ ಬಳಿ ಕೇವಲ ಬಟ್ಟೆ, ನೀರು ಹಾಗೂ ಕೆಲವು ಬಿಸ್ಕೇಟ್‍ಗಳಿವೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾವು ತಲೆಗೆ ಬಟ್ಟೆಯನ್ನು ಸುತ್ತುಕೊಂಡಿದ್ದೇವೆ. ಕೊರೊನಾ ವೈರಸ್‍ನಿಂದ ತಪ್ಪಿಸಿಕೊಳ್ಳಲು ನಮ್ಮ ಬಳಿ ಏನೂ ಇಲ್ಲ ಎಂದು ತಮ್ಮ ನೋವನ್ನು ಹೊರಹಾಕಿದರು.