ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವದಿಯಲ್ಲಿ 356 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 2 ಮರಣ ಪ್ರಕರಣ ದಾಖಲಾಗಿದೆ. ಜೊತೆಗೆ 6 ಓಮಿಕ್ರಾನ್ ಕೇಸ್‍ಗಳು ದಾಖಲಾಗುವ ಮೂಲಕ 32ರಲ್ಲಿದ್ದ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಂದು 38ಕ್ಕೆ ಏರಿಕೆ ಕಂಡಿದೆ. ಸಕ್ರಿಯ ಪ್ರಕರಣ ಒಟ್ಟು ಸಂಖ್ಯೆ 7,456ಕ್ಕೆ ತಲುಪಿದೆ.
ಇಂದು ಒಟ್ಟು 347 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 30,05,232 ಮಂದಿಗೆ ಕೊರೊನಾ ಬಂದಿದೆ. 39,59,429 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.56 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.50 ರಷ್ಟಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆಯಲು 60 ವರ್ಷ ಮೇಲ್ಪಟ್ಟವರಿಗೆ ಹೊಸ ಮಾರ್ಗಸೂಚಿ
ಬೆಂಗಳೂರಿನಲ್ಲಿ 269 ಪಾಸಿಟಿವ್ ಕೇಸ್ ಮತ್ತು 1 ಮರಣ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 2,17,650 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 69,993 ಸ್ಯಾಂಪಲ್ (ಆರ್‌ಟಿಪಿಸಿಆರ್ 47,698 + 22,295 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 269, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 1, ಚಿತ್ರದುರ್ಗ 1, ದಕ್ಷಿಣ ಕನ್ನಡ 10, ದಾವಣಗೆರೆ 1, ಧಾರವಾಡ 1, ಗದಗ 0, ಹಾಸನ 6, ಹಾವೇರಿ 0, ಕಲಬುರಗಿ 2, ಕೊಡಗು 3, ಕೋಲಾರ 3, ಕೊಪ್ಪಳ 0, ಮಂಡ್ಯ 1, ಮೈಸೂರು 10, ರಾಯಚೂರು 0, ರಾಮನಗರ 0, ಶಿವಮೊಗ್ಗ 3, ತುಮಕೂರು 7, ಉಡುಪಿ 20, ಉತ್ತರ ಕನ್ನಡ 3, ವಿಜಯಪುರ 5 ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.