– ಸ್ಥಳೀಯರಲ್ಲಿ ಕೊರೊನಾ ಆತಂಕ
ಚಿಕ್ಕಮಗಳೂರು: ನಾಲ್ಕೈದು ದಿನ ರಜೆ ಅಥವ ವೀಕ್ ಎಂಡ್‍ನಲ್ಲಿ ತಾಲೂಕಿನ ಮುಳ್ಳಯ್ಯನಗಿರಿಗೆ ಭಾರೀ ಪ್ರವಾಸಿಗರು ಬರುವುದು ಮಾಮೂಲಿ. ಆದರೆ ಕಾಫಿನಾಡಿಗೆ ಈಗ ವೀಕ್ ಡೇಸ್‍ನಲ್ಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬುಧವಾರ ಮುಳ್ಳಯ್ಯನಗಿರಿ ಭಾಗಕ್ಕೆ 350ಕ್ಕೂ ಹೆಚ್ಚು ವಾಹನಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.
Advertisement
ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿತ್ತು. ನಿಷೇಧವಿದ್ದರೂ ನೂರಾರು ಪ್ರವಾಸಿಗರು ಬಂದು ವಾಪಸ್ ಹೋಗಿದ್ದರು. ಪ್ರವಾಸಿ ತಾಣಗಳು ಆರಂಭವಾಗುವುದನ್ನೇ ಕಾಯುತ್ತಿದ್ದ ಪ್ರವಾಸಿಗರು ಅನ್‍ಲಾಕ್ ಆದ ಮೇಲೆ ದಿನಂ ಪ್ರತಿ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ಮೂರು ತಿಂಗಳ ಬಳಿಕ ಪ್ರವಾಸಿ ತಾಣಗಳು ಆರಂಭಗೊಂಡ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದಾರೆ.
Advertisement
Advertisement
ಜೂನ್-ಜುಲೈ-ಆಗಸ್ಟ್ ತಿಂಗಳಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಬಾಬಾಬುಡನ್ ಗಿರಿಯ ಸೌಂದರ್ಯವನ್ನ ನೋಡಲು ಅದ್ಭುತವಾಗಿರುತ್ತೆ. ಆದರೆ ಲಾಕ್‍ಡೌನ್ ಇದ್ದ ಕಾರಣ ಪ್ರವಾಸಿಗರು ಜಿಲ್ಲೆಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಮುಳ್ಳಯ್ಯನಗಿರಿ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಜಿಲ್ಲೆಯ ಜನರಿಗೆ ಆತಂಕ ಕೂಡ ಉಂಟಾಗಿದೆ. ಇದನ್ನೂ ಓದಿ: ಕೋವಿಡ್ ನಿಯಮ ಪಾಲಿಸಿಲ್ಲ ಅಂದ್ರೆ ಈಗಿರುವ ವಿನಾಯ್ತಿ ರದ್ದು – ಮತ್ತೆ ಲಾಕ್‍ಡೌನ್ ಬಗ್ಗೆ ಸಿಎಂ ಮಾತು
Advertisement
ಕಳೆದ ನಾಲ್ಕೈದು ದಿನದಿಂದ ಜಿಲ್ಲೆಯ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗಿರಿ ಭಾಗದ ಹೋಂ ಸ್ಟೇ, ರೆಸಾರ್ಟ್‍ಗಳು ಸಂಪೂರ್ಣ ಬುಕ್ ಆಗಿವೆ. ಪ್ರವಾಸಿಗರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ರೂಂಗಾಗಿ ದುಂಬಾಲು ಬಿದ್ದಿದ್ದಾರೆ. ರೂಂಗಳು ಸಿಗುತ್ತಿಲ್ಲ. ವಾರ, ಹದಿನೈದು ದಿನ ಬಿಟ್ಟು ಬರುತ್ತೇವೆ ಎಂದರೂ ಗಿರಿ ಭಾಗದ ಹೋಂ ಸ್ಟೇ, ರೆಸಾರ್ಟ್‍ನಲ್ಲಿ ರೂಂಗಳು ಸಿಗುತ್ತಿಲ್ಲ. ಬರುತ್ತಿರುವ ಪ್ರವಾಸಿಗರನ್ನ ಕಂಡು ಜಿಲ್ಲೆಯ ಜನರಿಗೆ ಕೊರೊನಾ ಮತ್ತೆ ಎಲ್ಲಿ ಹೆಚ್ಚಾಗುತ್ತೋ ಎಂಬ ಆತಂಕ ಮನೆಮಾಡಿದೆ. ಬರುತ್ತಿರುವ ಪ್ರವಾಸಿಗರಿಗೆ ಚೆಕ್‍ಪೋಸ್ಟ್ ಸಿಬ್ಬಂದಿ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸುವಂತೆ ಸೂಚಿಸಿ ಗಿರಿ ಭಾಗಕ್ಕೆ ಕಳಿಸುತ್ತಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣಕ್ಕಾಗಿ ಕೈಯಲ್ಲಿ ಮೊಬೈಲ್ ಹಿಡಿದು ಬೆಟ್ಟ-ಗುಡ್ಡ ಏರಿ, ಕಾಡುಮೇಡು ಅಲೆಯುತ್ತಿರುವ ಕಳಸದ ಮಕ್ಕಳು