ಚೆನ್ನೈ: ರಾಹುಲ್ ಚಹರ್ ಮತ್ತೊಮ್ಮೆ ಬೌಲಿಂಗ್ನಲ್ಲಿ ಕಮಾಲ್ ಮಾಡಿದ್ದು ಮುಂಬೈ ಇಂಡಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 13 ರನ್ಗಳಿಂದ ಜಯಗಳಿಸಿದೆ.
ಗೆಲ್ಲಲು 151 ರನ್ಗಳ ಗುರಿಯನ್ನು ಪಡೆದಿದ್ದ ಹೈದರಾಬಾದ್ ಅಂತಿಮವಾಗಿ 20 ಓವರ್ಗಳಲ್ಲಿ 137 ರನ್ಗಳಿಗೆ ಆಲೌಟ್ ಆಯ್ತು. ಈ ಮೂಲಕ ಹೈದರಾಬಾದ್ ತಂಡ ಲೀಗ್ ಹಂತದ ಸತತ ಮೂರನೇ ಸೋಲಿನ ಕಹಿ ಅನುಭವಿಸಿತು.
Advertisement
Advertisement
ಮುಂಬೈ ಗೆದ್ದಿದ್ದು ಹೇಗೆ?
ಕೊನೆಯ 36 ಎಸೆತಗಳಲ್ಲಿ 49 ರನ್ಗಳ ಅಗತ್ಯವಿತ್ತು. ಈ ವೇಳೆ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತ್ತು. ರಾಹುಲ್ ಚಹರ್ ಎಸೆದ 15ನೇ ಓವರ್ನಲ್ಲಿ ವಿರಾಟ್ ಸಿಂಗ್ ಮತ್ತು ಅಭಿಷೇಕ್ ಶಮಾ ಔಟಾದರು. ಇಲ್ಲಿಂದ ಪಂದ್ಯ ಮುಂಬೈ ಕಡೆ ವಾಲಿತು. ಕೊನೆಯಲ್ಲಿ ವಿಜಯ್ ಶಂಕರ್ ಕೃನಾಲ್ ಪಾಂಡ್ಯಗೆ 2 ಸಿಕ್ಸರ್ ಸಿಡಿಸಿದರೂ ಬುಮ್ರಾ ಓವರ್ನಲ್ಲಿ 28 ರನ್ ಗಳಿಸಿ ಔಟಾದರು. ವಿಜಯ್ ಶಂಕರ್ ಔಟಾದ ಬೆನ್ನಲ್ಲೇ ಭುವನೇಶ್ವರ್ ಕುಮಾರ್, ಕಲೀಲ್ ಅಹ್ಮದ್ ಸಹ ಔಟಾದರು. 35 ರನ್ಗಳಿಗೆ ಕೊನೆಯ 7 ವಿಕೆಟ್ಗಳ ಪತನಗೊಂಡಿದ್ದರಿಂದ ಹೈದರಾಬಾದ್ ತಂಡ ಸೋಲನ್ನು ಅನುಭವಿಸಿದೆ.
Advertisement
Advertisement
ಮೊದಲ 7 ಓವರ್ಗಳಲ್ಲಿ 62 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ ತಂಡ ಮೊದಲು ಜಾನೀ ಬೈರ್ಸ್ಟೋವ್ 43 ರನ್( 22 ಎಸೆತ, 3 ಬೌಂಡರಿ, 4 ಸಿಕ್ಸರ್) ವಿಕೆಟ್ ಕಳೆದುಕೊಂಡಿತು. ನಾಯಕ ಡೇವಿಡ್ ವಾರ್ನರ್ 36 ರನ್(34 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿದರೆ, ವಿಜಯ್ ಶಂಕರ್ 28 ರನ್(25 ಎಸೆತ, 2 ಬೌಂಡರಿ) ಹೊಡೆದರು.
ರಾಹುಲ್ ಚಹರ್ ಮತ್ತು ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರೆ ಬುಮ್ರಾ 4 ಓವರ್ ಎಸೆದು 14 ರನ್ ನೀಡಿ 1 ವಿಕೆಟ್ ಪಡೆದು ರನ್ ನಿಯಂತ್ರಣ ಮಾಡಿದರು.
ಸಾಧಾರಣ ಮೊತ್ತ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಮೊದಲ ವಿಕೆಟ್ಗೆ ರೋಹಿತ್ ಶರ್ಮ ಮತ್ತು ಕ್ವಿಂಟನ್ ಡಿ ಕಾಕ್ ಸೇರಿ 51 ರನ್ಗಳ ಜೊತೆಯಾಟ ವಾಡಿದ್ದರು. ರೋಹಿತ್ ಶರ್ಮ 32 ರನ್ (25 ಎಸೆತ,5 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 10 ರನ್(6 ಎಸೆತ, 1 ಬೌಂಡರಿ, 1 ಸಿಕ್ಸರ್) ಮತ್ತು ಇಶಾನ್ ಕಿಶಾನ್ 12 ರನ್ (21 ಎಸೆತ) ಬಾರಿಸಿ ನಿರಾಸೆ ಮೂಡಿಸಿದರು.
ಇತ್ತ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕ್ವಿಂಟನ್ ಡಿ ಕಾಕ್ ಕೂಡ 40 ರನ್( 39 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಅಂತಿಮವಾಗಿ ಕೀರನ್ ಪೊಲಾರ್ಡ್ 35 ರನ್( 22 ಎಸೆತ, 1 ಬೌಂಡರಿ ಮತ್ತು 3 ಸಿಕ್ಸರ್) ಸಿಡಿಸಿ ಮುಂಬೈ ಮೊತ್ತವನ್ನು 150ಕ್ಕೆ ತಂದು ನಿಲ್ಲಿಸಿದರು.
ಹೈದರಾಬಾದ್ ಪರ ಶಿಸ್ತಿನ ದಾಳಿ ನಡೆಸಿದ ವಿಜಯ್ ಶಂಕರ್ ಮತ್ತು ಮುಜಿದ್ ಉಲ್ ರೆಹಮಾನ್ 2 ವಿಕೆಟ್ ಪಡೆದರೆ, ಕಲೀಲ್ ಅಹಮದ್ 1 ವಿಕೆಟ್ ಕಬಳಿಸಿದರು.